ಮಂಗಳೂರು: ಕ್ರೆಟಾ ಕಾರಿನ ಆಸೆಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಮಹಿಳೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 13. ಕಾರಿನ ಆಸೆಗೆ ಬಿದ್ದ ವಿದ್ಯಾವಂತ ಮಹಿಳೆಯೋರ್ವರು ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.


ವಮಚನೆಗೊಳಗಾದವರನ್ನು ಮಂಗಳೂರಿನ ಮೀನಾ ಎಂದು ಗುರುತಿಸಲಾಗಿದೆ. ಇವರಿಗೆ ಕಳೆದ ಕೆಲ ದಿನಗಳ ಹಿಂದೆ ನ್ಯಾಪ್ಟೋಲ್​ ಆನ್​-ಲೈನ್​ ಶಾಪಿಂಗ್​ ನಿಂದ ಒಂದು ಪೋಸ್ಟ್​ ಬಂದಿದ್ದು, ಅದರಲ್ಲಿ ನಿಮಗೆ ಕ್ರೇಟಾ ಕಾರೊಂದು ಲಕ್ಕಿ ಡ್ರಾ ಮೂಲಕ ಬಹುಮಾನವಾಗಿ ಬಂದಿದೆ ಎಂದಿತ್ತು. ಈ ಪೋಸ್ಟ್ ನೋಡಿದ ಮಹಿಳೆಯು ಅದರಲ್ಲಿದ್ದ 9144391473 ನಂಬರ್​ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಫೋನ್ ರಿಸೀವ್ ಮಾಡಿದ ವ್ಯಕ್ತಿ ನೀವು ಬಹುಮಾನ ಪಡೆದುಕೊಳ್ಳಲು ತೆರಿಗೆ ಪಾವತಿಸಬೇಕು ಎಂದಿದ್ದಾನೆ. ಇದನ್ನು ನಂಬಿದ ಆಕೆ ಹಿಂದೆ ಮುಂದೆ ಯೋಚಿಸದೇ ಬ್ಯಾಂಕ್ ಮೂಲಕ ಹಂತ ಹಂತವಾಗಿ ಕೂಡಿಟ್ಟ ಹಣವನ್ನು ಒಟ್ಟು 59 ಸಾವಿರದ 200 ರೂಪಾಯಿಗಳನ್ನು ಅಪರಿಚಿತನ ಅಕೌಂಟ್ ಗೆ ಜಮಾವಣೆ ಮಾಡಿದ್ದಾರೆ. ಬಳಿಕ ಆರೋಪಿ ಪದೇ ಪದೇ ಕರೆ ಮಾಡಿ ನೀವು ಇಂದು ಸಂಜೆಯ ಒಳಗೆ ಬಹುಮಾನ ಪಡೆಯಬಹುದು. 51 ಸಾವಿರದ 200 ರೂಪಾಯಿಯನ್ನು (GST-CGST) ಯನ್ನು ಕೂಡಲೇ ಪಾವತಿಸಿ ಎಂದು ಕಿರಿ ಕಿರಿ ನೀಡಿದ್ದಾರೆ. ಇದನ್ನರಿತ ಮಹಿಳೆಯು ಅನುಮಾನಗೊಂಡು ವಿಚಾರಣೆ ನಡೆಸಿದಾಗ ತಾನು ಮೋಸ ಹೋಗಿರೋದು ಬೆಳಕಿಗೆ ಬಂದಿದೆ.

Also Read  ಜಿಲ್ಲಾಡಳಿತದ ವತಿಯಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ

error: Content is protected !!
Scroll to Top