(ನ್ಯೂಸ್ ಕಡಬ) newskadaba.com ಮಂಗಳೂರು ಫೆ. 13. ರ್ಯಾಗಿಂಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಂಗಳೂರಿನ ದೇರಳಕಟ್ಟೆ ಕಣಚೂರು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.
ದೇರಳಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ 18 ವಿದ್ಯಾರ್ಥಿಗಳನ್ನು ಕೂದಲು- ಗಡ್ಡ ಬೋಳಿಸುವಂತೆ, ತರಗತಿಗಳನ್ನು ಬೆಂಕಿ ಪೊಟ್ಟಣದಲ್ಲಿ ಅಳತೆ ಮಾಡುವಂತೆ ರ್ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಕ್ಯಾಂಪಸ್ ಆಫೀಸರ್ ಮಾರ್ಟಿನ್ ಜೋರ್ಜ್ ಉಳ್ಳಾಲ ಠಾಣೆಯಲ್ಲಿ ದೂರಿನಂತೆ ತನಿಖೆ ನಡೆಸಿದ ಪೊಲೀಸರು ವಿದ್ಯಾರ್ಥಿಗಳಾದ ಕೇರಳದ ಕ್ಯಾಲಿಕಟ್ ನ ಪಾಳಿಯಾಡ್ ನಿವಾಸಿ ಮುಹಮ್ಮದ್ ಶಮ್ಮಾಸ್ (19), ಕೊಟ್ಟಾಯಂ ವೈಕ್ಯಂ ನಿವಾಸಿ ಅಕ್ಷಯ್ ಕೆ.ಎಸ್. (19), ಕೊಟ್ಟಾಯಂ ಅಯರ್ ಕುನ್ನ ರೋಬಿನ್ ಬಿಜು (20), ಕಾಸರಗೋಡು ಉಳ್ಳೂರಿನ ಅಬ್ದುಲ್ ಅನಸ್ (21), ಚಿಟ್ಟಾರಿಕಲ್ ಜೆಫಿನ್ ರೋಯಿಚನ್ (19), ಕೊಟ್ಟಾಯಂನ ಅಲ್ವಿನ್ ಜೋಯ್ (19), ಜೆರೋನ್ ಸಿರಿಲ್ (19), ಪತ್ತನಂತಿಟ್ಟ ನಿವಾಸಿ ಸೂರಜ್ (19), ಚೆಮ್ಮತ್ತೂರು ಆಸಿನ್ ಬಾಬು (19), ಮಲಪುರಂ ಜುಬಿನ್ ಮೆಹರೂಫ್ (21), ಅಬ್ದುಲ್ ಬಾಸಿತ್ (19) ಎಂಬವರನ್ನು ಬಂಧಿಸಿದ್ದರು.