(ನ್ಯೂಸ್ ಕಡಬ) newskadaba.com ಮಂಗಳೂರು, ಅ.19. ಇಲ್ಲಿನ ಬಿಜೈನಲ್ಲಿರುವ ಲಾಂಡ್ರಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದ್ದು, ಒಂದು ಲಕ್ಷ ರೂ. ನಷ್ಟು ನಷ್ಟ ಉಂಟಾದ ಘಟನೆ ಬುಧವಾರ ಬೆಳಗ್ಗಿನ ಜಾವ ನಡೆದಿದೆ.
ರೆನ್ವಿಕ್ ಎಂಬವರ ಮಾಲಕತ್ವದ ಆಧುನಿಕ ತಂತ್ರಜ್ಞಾನವಿರುವ ಮೈ ಆಂಗರ್ ಲಾಂಡ್ರಿಗೆ ಬೆಂಕಿ ಹೊತ್ತಿಕೊಂಡು ದುಬಾರಿ ಮೌಲ್ಯದ ಸೀರೆಗಳು ಸೇರಿದಂತೆ ಇತರ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಕದ್ರಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.