ಮಂಗಳೂರು: ಸ್ನಾನ ಮಾಡುತ್ತಿದ್ದ ವೇಳೆ ಮಹಿಳೆಯ ವಿಡಿಯೋ ಚಿತ್ರೀಕರಣ ➤ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 13. ಇಲ್ಲಿನ ಖಾಸಗಿ ಆಸ್ಪತ್ರೆಯ ಕೊಠಡಿಯೊಂದರಲ್ಲಿ ಮಹಿಳೆಯು ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ


ಬಂಧಿತನನ್ನು ಮದನಿನಗರ ನಿವಾಸಿ ಅಬ್ದುಲ್‌ ಮುನೀರ್‌ (40) ಎಂದು ಗುರುತಿಸಲಾಗಿದೆ. ಮಹಿಳೆಯು ಅಸೌಖ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸ್ನಾನ ಮಾಡಲೆಂದು ತೆರಳಿದ್ದ ವೇಳೆ ಆರೋಪಿ ಮುನೀರ್‌ ತನ್ನ ಮೊಬೈಲ್‌ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದನು.
ಇದನ್ನು ಗಮನಿಸಿದ ಮಹಿಳೆಯು ಹೊರಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ. ಈ ಕುರಿತು ಮಹಿಳೆಯು ಜ. 20ರಂದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದೂರತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮರದಲ್ಲಿ ದೃಶ್ಯಾವಳಿಗ‌ಳನ್ನು ಪರಿಶೀಲಿಸಿದಾಗ ಮುನೀರ್‌ ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿತ್ತು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶುಕ್ರವಾರ ಪೊಲೀಸರು ಆತನನ್ನು ಮನೆ ಸಮೀಪ ಬಂಧಿಸಿದ್ದಾರೆ.

Also Read  ಅಂತ್ಯೋದಯ ಯೋಜನೆ; ಉಚಿತ ಆಹಾರ ಧಾನ್ಯಗಳ ವಿತರಣೆ

error: Content is protected !!
Scroll to Top