ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ➤ ಮೃತರ ಸಂಖ್ಯೆ 19ಕ್ಕೇರಿಕೆ

(ನ್ಯೂಸ್ ಕಡಬ) newskadaba.com ಚೆನ್ನೈ, ಫೆ. 13. ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಮಡಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, 30ಕ್ಕೂ ಅಧಿಕ ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ತಮಿಳುನಾಡಿನ ವಿರುಧ್ ನಗರದಲ್ಲಿ ನಡೆದಿದೆ.

ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 19 ಮಂದಿ ಮೃತಪಟ್ಟಿದ್ದು, ಸ್ಫೋಟದಲ್ಲಿ 10 ಕೊಠಡಿಗಳು ನಾಶವಾಗಿದೆ. ಘಟನೆ ನಡೆದಾಗ ಕನಿಷ್ಠ 50 ಮಂದಿ ಕಾರ್ಮಿಕರು ಒಳಗಡೆ ಇದ್ದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗಣೀಶನ್ ಹೇಳಿದ್ದಾರೆ. ಶುಕ್ರವಾರದಂದು ಮಧ್ಯಾಹ್ನ ವಿರುಧ್ ನಗರ ಜಿಲ್ಲೆಯ ಅಚಕುಲಂ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

Also Read  ಸಂವಿಧಾನ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ

ರಾಸಾಯನಿಕಗಳನ್ನು ಬೆರೆಸುವಾಗ ಉಂಟಾಗುವ ಘರ್ಷಣೆಯೇ ಸ್ಫೋಟಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಗಣೇಶನ್ ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.

error: Content is protected !!
Scroll to Top