(ನ್ಯೂಸ್ ಕಡಬ) newskadaba.com ಕಡಬ, ಫೆ. 13. ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲಿನ ಹುಲಿಚಾಮುಂಡಿ ಹಾಗು ಪರಿವಾರ ದೈವ ದೈವಸ್ಥಾನದ ಭಕ್ತಾದಿಗಳ ಸಹಕಾರದಿಂದ ನವೀಕೃತಗೊಳ್ಳುತ್ತಿದ್ದು, ಇದೇ ಫೆ. 14 ಮತ್ತು 15 ರಂದು ದೈವಿಕ ವಿಧಿವಿಧಾನಗಳಿಂದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಪದ್ಮವಿಭೂಷಣ ರಾಜರ್ಷೀ ಡಾ। ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ಹಾಗು ಬ್ರಹ್ಮಶೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ. ಫೆ. 14 ರಂದು ಹಸಿರು ಹೊರೆ ಕಾಣಿಕೆ ಸಂಗ್ರಹಣೆಗಾಗಿ ವಾಹನದ ಸೌಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಕಲ್ಲುಗುಡ್ಡೆ: ಫೆ. 14 ಮತ್ತು 15 ರಂದು ಹುಲಿಚಾಮುಂಡಿ ಹಾಗು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
