ದೈವಾರಾಧನಾ ಕ್ಷೇತ್ರಕ್ಕೆ ಅಗೇಲು ಸೇವೆಗೆಂದು ಕೋಳಿಯನ್ನು ಬಸ್ಸಿನಲ್ಲಿ ಒಯ್ಯುತ್ತಿದ್ದ ವೇಳೆ 50ರೂ. ಟಿಕೆಟ್ ಪಡೆದ ಕಂಡಕ್ಟರ್…‼️

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 12. ದೈವ ಆರಾಧನಾ ಕ್ಷೇತ್ರಕ್ಕೆ ಅಗೇಲು ಸೇವೆ ಸಲ್ಲಿಸಲೆಂದು ಒಂದು ಚೀಲದಲ್ಲಿ ಕೋಳಿಯನ್ನು ಹಿಡಿದುಕೊಂಡು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇದನ್ನು ಗಮನಿಸಿದ ಕಂಡಕ್ಟರ್‌ 50 ರೂಪಾಯಿ ಪಡೆದುಕೊಂಡು ಇಬ್ಬರಿಗೂ ಟಿಕೆಟ್‌ ನೀಡಿದ ಘಟನೆ ನಡೆದಿದೆ.

ಈ ಘಟನೆಯನ್ನು ಬುಧವಾರ ಪುತ್ತೂರಿನಲ್ಲಿ ನಡೆದ ಸಾರಿಗೆ ಅದಾಲತ್‌ ನಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಈ ವಿಷಯವನ್ನು ಬಹಿರಂಗಪಡಿಸಿದರು. ಇದಕ್ಕೆ ಪ್ರತ್ಯುತ್ತರಿಸಿದ ವಿಭಾಗೀಯ ಸಂಚಲನಾ ಅಧಿಕಾರಿ ಮುರಳೀಧರ್‌, ಸರಕಾರದ ಸುತ್ತೋಲೆ ಪ್ರಕಾರ ಬಸ್ಸಿನಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಯಾವುದೇ ಪ್ರಾಣಿ- ಪಕ್ಷಿ ಒಯ್ಯುವಂತಿಲ್ಲ. ಒಂದು ಕೋಳಿಗೆ ಒಬ್ಬ ಪ್ರಯಾಣಿಕನಷ್ಟೇ ದರವನ್ನು ನಿಗದಿಪಡಿಸಬೇಕೆಂಬ ನಿಯಮವಿದ್ದು ಇದರಿಂದ ಅವರು ಬಹುಷಃ
50 ರೂ. ವಿಧಿಸಿದ್ದಾರೆ ಎಂದರು.

Also Read  ಲಾರಿ ತಡೆದು ಹಣ ವಸೂಲಿ ಆರೋಪ ➤ ಎಎಸ್ಐ ಸಹಿತ ಇಬ್ಬರು ಪೊಲೀಸರ ಅಮಾನತು

error: Content is protected !!
Scroll to Top