ಅರಂತೋಡು: ಸಯ್ಯದ್ ಪಾಣಕ್ಕಾಡ್ ತಂಙಳ್ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 12. ಅರಂತೋಡು ತೆಕ್ಕಿಲ್ ಪ್ರತಿಷಾನದ ಅಧ್ಯಕ್ಷರೂ ಕೆಪಿಸಿಸಿ ಮಾಜಿ ಕಾರ್ಯದರ್ಶಿಯೂ ಆದ ಟಿ.ಎಮ್.ಶಹೀದ್ ತೆಕ್ಕಿಲ್ ಅವರ ನಿವಾಸಕ್ಕೆ ಕೇರಳ ರಾಜ್ಯ ಮುಸ್ಲಿಂ ಲೀಗ್ ಉಸ್ತುವಾರಿ ಸಮಿತಿ ಸದಸ್ಯರಾದ ಬಹು।ಪಾಣಕ್ಕಾಡ್ ಸಯ್ಯದ್ ಸಾದಿಕಾಲಿ ಶಿಹಾಬ್ ತಂಙಳ್ ಭೇಟಿ ನೀಡಿ ತೆಕ್ಕಿಲ್ ಪ್ರತಿಷ್ಠಾನದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರನ್ನು ಟಿ.ಎಮ್ .ಶಹೀದ್ ರವರು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು।ಅಲ್ಹಾಜ್ ಇಸ್ಹಾಖ್ ಬಾಖವಿ, ಟಿ.ಎಮ್ .ಬಾಬಾ ಹಾಜಿ ತೆಕ್ಕಿಲ್, ಟಿ.ಎಮ್.ಶಾಝ್ ತೆಕ್ಕಿಲ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಟಿ.ಎಮ್.ಜಾವೇದ್ ತೆಕ್ಕಿಲ್, ಕೆ.ಎಮ್.ಸಿಸಿ ನೌಶಾದ್ ಬೆಂಗಳೂರು, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ.ಶಫೀಖ್, ಸುಳ್ಯ ತಾಲೂಕು ಮದರಸ ಮ್ಯಾನೇಜ್‌ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಪೇರಡ್ಕ ಮಸೀದಿಯ ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಖ್ ತೆಕ್ಕಿಲ್ ಮೊಟ್ಟಂಗಾರ್, ಅಬೂಬಕ್ಕರ್ ಪಾರೆಕ್ಕಲ್, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಕೆ.ಎಮ್.ಮುಸ್ತಫಾ ಸುಳ್ಯ, ಮಾಜಿ ನಗರ ಪಂಚಾಯತ್ ಅಧ್ಯಕ್ಷ ಸಂಶುದ್ದೀನ್, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ಸ್, ಸಿದ್ದೀಖ್ ಕೊಕ್ಕೊ, ತಾಜುದ್ದೀನ್ ಟರ್ಲಿ, ಜುನೈದ್ ಗೂನಡ್ಕ ಮುಂತಾದವರು ಉಪಸ್ಥಿತರಿದ್ದರು. ಸ್ಥಳಿಯ ಮಸೀದಿ ಖತೀಬರಾದ ಬಹು ಅಲ್ಹಾಜ್ ಇಸ್ಹಾಖ್ ಬಾಖವಿಯವರು ತಂಙಳರನ್ನು ಪರಿಚಯಿಸಿದರು.

Also Read  ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ವಿಧಿವಶ

error: Content is protected !!
Scroll to Top