ಕಡಬ: ಯಶಸ್ವಿ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಬಂಧಿಸಿದ ಅರಣ್ಯಾಧಿಕಾರಿಗಳು ? ದಂಪತಿಗೆ ದಾಳಿ ನಡೆಸಿದ್ದ ಚಿರತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.12. ದಂಪತಿಗೆ ದಾಳಿ ಮಾಡಿ ಮರದ ಮೇಲೆ ಏರಿ ಕುಳಿತಿದ್ದ, ಚಿರತೆಯನ್ನು ಯಶಸ್ವಿ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯ ಹೇರ ನಿವಾಸಿಗಳಾದ ಶೇಖರ್ ಕಾಮತ್ ಹಾಗೂ ಸೌಮ್ಯ ಕಾಮತ್ ಎಂಬವರು ಶುಕ್ರವಾರ ಬೆಳಗಿನ ಜಾವ ತೋಟಕ್ಕೆ ಪೈಪ್ ಜೆಟ್ ಬದಲಾಯಿಸಲೆಂದು ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿತ್ತು. ತಕ್ಷಣವೇ ಇಬ್ಬರನ್ನೂ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ‌. ಪಿಳಿಕುಲದ ನುರಿತ ಶೂಟರ್ ಡಾ| ಯಶಸ್, ಸುಳ್ಯ ಎಸಿಎಫ್ ಆಸ್ಟಿನ್ ಪಿ.ಸೋನ್ಸ್, ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್, ಹಾಗೂ ಸಿಬ್ಬಂದಿಗಳು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

Also Read  ನಾಲೆಡ್ಜ್ ಸಿಟಿಯಲ್ಲಿನ ನಿರ್ಮಾಣ ಹಂತದ ಕಟ್ಟಡ ಕುಸಿತ ➤ ಹಲವು ಕಾರ್ಮಿಕರಿಗೆ ಗಾಯ..!

error: Content is protected !!
Scroll to Top