ಬಾಳಿಲ: ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯ ತುಳು ಲಿಪಿ ನಾಮಫಲಕ ಅನಾವರಣ

(ನ್ಯೂಸ್ ಕಡಬ) newskadaba.com ಬಾಳಿಲ, ಫೆ. 12. ತುಳುವನ್ನು 8 ನೇ ಪರಿಚ್ಛೇದಕ್ಕೆ ಸೇರಿಸಬೇಕು, ತುಳು ರಾಜ್ಯದ ಅಧಿಕೃತ ಭಾಷೆ ಆಗಬೇಕು ಇದು ಪ್ರತಿಯೊಬ್ಬ ತುಳುವನ ದೊಡ್ಡ ಕನಸು, ಅದಕ್ಕಾಗಿ ತುಳುವರು ಹೋರಾಡುತ್ತಿದ್ದಾರೆ. ಈ ನಡುವೆ ತುಳು ಲಿಪಿಯ ಬೆಳವಣಿಗೆಗೂ ದುಡಿಯುತ್ತಿದ್ದಾರೆ. ಪ್ರತಿಯೊಂದು ಊರಿನಲ್ಲಿಯೂ ತುಳು ಲಿಪಿ ಕಲಿಕಾ ತರಗತಿ ನಡೆಸುತ್ತಿದ್ದಾರೆ. ಅಲ್ಲಲ್ಲಿ ತುಳು ಲಿಪಿ ನಾಮ ಫಲಕ ಹಾಕುತ್ತಿದ್ದಾರೆ, ಇದಕ್ಕೆ ಬೆಂಬಲವಾಗಿ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ತುಳು ಲಿಪಿಯ ನಾಮ ಫಲಕವನ್ನು ಪಾಜಪಳ್ಳದಲ್ಲಿ ಶ್ರೀ ಕ್ಷೇತ್ರದ ಪ್ರತಿಷ್ಠಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುರುವಾರದಂದು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿ ಶ್ರೀ ಪರಮೇಶ್ವರಯ್ಯ ಕಾಂಚೋಡು ಅನಾವರಣ ಮಾಡಿದರು.

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯದ ಅನಾವರಣ ಕಾರ್ಯಕ್ರಮವು ಚೆಂಡೆ ವಾದನದೊಂದಿಗೆ ಯಶಸ್ವಿಯಾಗಿ ನಡೆಯಿತು. ಶ್ರೀ ಕ್ಷೇತ್ರದ ಜಾತ್ರೆ ಫೆಬ್ರವರಿ 11 ರಿಂದ 14 ರ ವರೆಗೆ ವರ್ಷಂಪ್ರತಿ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವಾಲಯದ ಜಾತ್ರೆಗೆ ಹಸಿರು ಕಾಣಿಕೆಯನ್ನು ಮೆರವಣಿಗೆಯಲ್ಲಿ ಹೋಗಿ ದೇವರಿಗೆ ಸಮರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ತುಳು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ, ಜಾತ್ರೊತ್ಸವ ಸಮಿತಿಯ ಅಧ್ಯಕ್ಷ ಗಂಗಾಧರ ಮುಪ್ಪೇರ್ಯ, ಸುಳ್ಯ ತಾಲೂಕು ಪಂಚಾಯತ್ ಸದಸ್ಯೆ ಜಾಹ್ನವಿ ಕಾಂಚೋಡು, ಬಾಳಿಲ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ರೈ, ಸತ್ಯನಾರಾಯಣ, ಗೋವಿಂದ ಭಟ್, ಮಹಾಬಲೇಶ್ವರಯ್ಯ, ನಾರಾಯಣ ಭಟ್, ಶ್ರೀನಾಥ್ ರೈ ದೊಳ್ತೋಡಿ, ವಸಂತ ಗೌಡ ಕಾಯಾರ, ಕೌಶಿಕ್ ಗೌಡ ಕೊಡಪಾಲ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group