ಉಪ್ಪಿನಂಗಡಿ: ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜಾ ಮತ್ತು ಈಶ್ವರಪ್ಪ ವಿರುದ್ದ ಎಸ್ಡಿಪಿಐ ದೂರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ: ಫೆ. 12. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಳೆದ ಜನವರಿ 31 ರಂದು ಬಿಜೆಪಿ ಪಕ್ಷದ ಬಹಿರಂಗ ಕಾರ್ಯಕ್ರಮವೊಂದರಲ್ಲಿ ಕೋಮುಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದು, ಈ ಬಗ್ಗೆ ಎಸ್‌ಡಿಪಿಐ ಪಕ್ಷದ ಮುಸ್ತಫಾ ಎಂಬುವವರು ಭಾಷಣ ವಿಡಿಯೋ ಸಿಡಿಯ ಲಗತ್ತಿಸಿದ ದಾಖಲೆಯೊಂದಿಗೆ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ತನ್ನ ಕಾರ್ಯಕರ್ತರಲ್ಲಿ ಗೋವನ್ನು ಮುಟ್ಟುವವರ ಕೈಕಾಲು ಕಡಿಯಿರಿ ನಾಲಗೆ ಸೀಳಿರಿ ಎನ್ನುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಮತ್ತು ಸ್ಥಳೀಯ ಶಾಸಕ ಹರೀಶ್ ಪೂಂಜಾ, ಒಂದು ನಿರ್ಧಿಷ್ಟ ಸಮುದಾವನ್ನು ಅವಹೇಳನ ಮಾಡಿರುತ್ತಾರೆ. ಇದರಿಂದ ತನ್ನ ಕಾರ್ಯಕರ್ತರು ಇದು ಪಕ್ಷದ ಅಧಿಕೃತ ಆದೇಶವೆಂಬಂತೆ ಅಲ್ಲಲ್ಲಿ ಅಮಾಯಕರ ಮೇಲೆ ಚೂರಿ ಇರಿತ ಹಲ್ಲೆ ಪ್ರಕರಣಗಳು ನಡೆಸುತ್ತಿದ್ದು, ಈ ಬಗ್ಗೆ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಇಂತಹ ಸಮಾಜದ ಸ್ವಾಸ್ಥ್ಯ ಕದಡುವಂತಹ ಭಾಷಣಗೈದವರನ್ನು ಕಾನೂನಿನಡಿಯಲ್ಲಿ ಬಂಧಿಸಬೇಕಾಗಿ ಉಪ್ಪಿನಂಗಡಿ ಎಸ್‌.ಡಿಪಿಐ ಪಕ್ಷದ ಮುಸ್ತಫಾ ಎಂಬುವವರು ತನ್ನ ದೂರಿನಲ್ಲಿ ತಿಳಿಸಿದ್ದಾರೆ. ದೂರುದಾರರ ಪರವಾಗಿ ಝಕರಿಯಾ ಕೊಡಿಪ್ಪಾಡಿ, ಶುಕೂರು ಕುಪ್ಪೆಟ್ಟಿ, ರಶೀದ್ ಮಠ ಜೊತೆಗಿದ್ದರು.

Also Read  ಸುಳ್ಯ ಶಾಸಕ ಅಂಗಾರರಿಂದ ನಾಳೆ ಕಡಬದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ

error: Content is protected !!
Scroll to Top