ಫೆ. 14 ಪ್ರೇಮಿಗಳ ದಿನದ ಪ್ರಯುಕ್ತ 5 ದಿವಸಗಳ ರಜೆ ಕೋರಿ ಪ್ರಾಂಶುಪಾಲರಿಗೆ ರಜಾ ಅರ್ಜಿ ಬರೆದ ವಿದ್ಯಾರ್ಥಿ..! ➤ ಅಷ್ಟಕ್ಕೂ ಆತ ಬರೆದದ್ದಾರೂ ಏನು..? ? ರಜಾ ಅರ್ಜಿ ವೈರಲ್

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಫೆ. 11. ವಿದ್ಯಾರ್ಥಿಗಳು ಸಾಮಾನ್ಯವಾಗಿ ಅನಾರೋಗ್ಯ, ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ರಜೆ ಕೇಳಿ ಶಾಲಾ ಮುಖ್ಯ ಗುರುಗಳಿಗೆ ರಜಾ ಅರ್ಜಿ ಬರೆಯುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬರೆದಿರುವ ರಜೆ ಅರ್ಜಿಯ ಪತ್ರವು ಇದೀಗ ಭಾರೀ ವೈರಲ್ ಆಗಿದೆ. ಇದಕ್ಕೆ ಕಾರಣ ಇಲ್ಲೊಬ್ಬ ವಿದ್ಯಾರ್ಥಿ ಫೆಬ್ರವರಿ 14 ರಂದು ಪ್ರೇಮಿಗಳ ದಿನದ ಹಿನ್ನೆಲೆ ರಜೆ ಕೇಳಿ ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದಾನೆ.


ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಎಸ್ ಶಿವರಾಜು ವಿಕ್ಟರ್ ಎಂಬಾತ ರಜೆ ಕೋರಿ ಪತ್ರ ಬರೆದಿದ್ದಾನೆ. ಇದೀಗ ಈತನ ರಜಾ ಅರ್ಜಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿ ಬರೆದಿರುವ ರಜಾರ್ಜಿ ಪತ್ರದಲ್ಲಿ ದೇಶದಾದ್ಯಂತ ಫೆ. 14ರಂದು ಪ್ರೇಮಿಗಳ ದಿನ ಆಚರಣೆಯ ಹಿನ್ನೆಲೆ ಹುಡುಗಿಯರ ಕಾಟ ತಡೆಯಲಾಗುತ್ತಿಲ್ಲ. ಹೀಗಾಗಿ ನನಗೆ ಐದು ದಿನಗಳ ರಜೆ ಬೇಕೆಂದು ಪ್ರಾಂಶುಪಾಲರಲ್ಲಿ ರಜೆ ಕೇಳಲು ವಿದ್ಯಾರ್ಥಿ ರಜಾರ್ಜಿ ಬರೆದಿದ್ದಾನೆ.

Also Read  ದಾನಿಗಳ ಸಹಾಯದಿಂದ ಚೇತರಿಸಿಕೊಂಡ ಬಡ ಜೀವ ➤ ಕೃತಜ್ಞತೆ ಸಲ್ಲಿಸಿದ ಹೆತ್ತಕರುಳು

ಅರ್ಜಿಯಲ್ಲಿ ಪ್ರಾಂಶುಪಾಲರ ಸಹಿ ಮತ್ತು ಮೊಹರು ಕೂಡಾ ಇದ್ದುದ್ದರಿಂದ, ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲರು “ತನ್ನ ಸಹಿಯನ್ನು ಯಾರೋ ನಕಲಿ ಮಾಡಿ, ಮೊಹರನ್ನು ಕದ್ದು ಹಾಕಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

error: Content is protected !!
Scroll to Top