ಹಾಸಿಗೆಯಲ್ಲೇ ಮೂತ್ರ ಮಾಡಿತೆಂದು 5 ವರ್ಷದ ಮಗುವಿನ ಕೊಲೆ ➤ ತಂದೆ ಹಾಗೂ ದೊಡ್ಡಮ್ಮ ಅರೆಸ್ಟ್

(ನ್ಯೂಸ್ ಕಡಬ) newskadaba.com ಲಕ್ನೋ, ಫೆ. 11. ಮಗು ಹಾಸಿಗೆಯಲ್ಲಿ ಶೌಚ ಮಾಡಿತು ಎಂಬ ಕಾರಣಕ್ಕೆ 5 ವರ್ಷದ ಮಗುವನ್ನು ದೊಡ್ಡಮ್ಮ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಫರೂಖಾಬಾದ್ ನಲ್ಲಿ ನಡೆದಿದೆ.

ಮೃತ ಮಗುವನ್ನು ಯಶ್ ಪ್ರತಾಪ್ (5) ಎಂದು ಗುರುತಿಸಲಾಗಿದೆ. ತಾಯಿಯನ್ನು ಕಳೆದುಕೊಂಡಿದ್ದ ಯಶ್ ನನ್ನು ಆತನ ತಂದೆ ರಾಮ್ ಬಹದ್ದೂರ್, ತನ್ನ ಸಹೋದರನ ಮನೆಯಲ್ಲಿ ಬಿಟ್ಟಿದ್ದಾನೆ. ಹೀಗಾಗಿ ಮಗು ಫರೂಖಾಬಾದ್ ನಗರದ ನ್ಯೂ ಫೌಜಿ ಕಾಲೋನಿಯಲ್ಲಿರುವ ದೊಡ್ಡಪ್ಪನ ಮನೆಯಲ್ಲಿ ವಾಸವಿತ್ತು. ಪ್ರತೀದಿನ ಈತ ಹಾಸಿಗೆಯಲ್ಲಿ ಶೌಚ ಮಾಡುತ್ತಿದ್ದು, ದೊಡ್ಡಮ್ಮನಿಗೆ ಬೆಳಗ್ಗೆ ಎದ್ದು ಮಗುವಿನ ಶೌಚವನ್ನು ತೆಗೆಯವುದು ಹಿಂಸೆಯಾಗಿತ್ತು. ಇದರಿಂದ ಕೋಪಗೊಂಡ ದೊಡ್ಡಮ್ಮ ಮಗುವಿಗೆ ಥಳಿಸಿದ್ದರಿಂದ ಮಗು ಮೃತಪಟ್ಟಿದೆ, ಇದಕ್ಕೆ ಮಗುವಿನ ತಂದೆಯೂ ಸಹಕರಿಸಿದ್ದಾನೆ ಎನ್ನಲಾಗಿದೆ.

Also Read  ಅನಂತ್ ಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ 1 ಕೋಟಿ ಬಹುಮಾನ ► ಮಾಜಿ ಜಿ.ಪಂ. ಸದಸ್ಯನಿಂದ ವಿವಾದಾತ್ಮಕ ಘೋಷಣೆ

ಮಗು ಮೃತಪಟ್ಟ ಬಳಿಕ ವಿಚಾರವನ್ನು ಮಗುವಿನ ತಂದೆಗೆ ತಿಳಿಸಿದ್ದು, ತಂದೆಯು ಮಗುವಿನ ಶವವನ್ನು ಬ್ಯಾಗಿನಲ್ಲಿ ಹೊತ್ತೊಯ್ದು ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾನೆ. ಇದಾದ ಬಳಿಕ ಮಗು ನಾಪತ್ತೆಯಾಗಿದೆ ಎಂದು ದೊಡ್ಡಮ್ಮನೇ ಸ್ವತಃ ದೂರು ದಾಖಲಿಸಿದ್ದಾಳೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು ದೊಡ್ಡಮ್ಮನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ತಿಳಿಸಿದ್ದಾಳೆ.

error: Content is protected !!
Scroll to Top