ಜಿಲ್ಲೆಯಾದ್ಯಂತ 18 ವಾರಂಟ್ ಹೊಂದಿದ್ದ ಕುಖ್ಯಾತ ಆರೋಪಿ ಕೊನೆಗೂ ಪುತ್ತೂರು ಪೊಲೀಸರ ಬಲೆಗೆ..!

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 11. ದ.ಕ ಜಿಲ್ಲೆಯಾದ್ಯಂತ ವಿವಿಧ ಠಾಣಾ ವ್ಯಾಪ್ತಿಯ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ವಾರಂಟ್ ಆಸಾಮಿ ಕೇರಳ ಮೂಲದ ಕುಖ್ಯಾತ ಆರೋಪಿ ಅಶ್ರಫ್ ತಾರೀಗುಡ್ಡೆ (40) ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಕಾಲಿಗಾವು ತಾಲೂಕಿನ ಪೋಗೋಡಿ, 4 ಸೆನ್ಸ್ ಕಾಲೊನಿ ನಿವಾಸಿಯಾಗಿರುವ ಈತ ಜಿಲ್ಲೆಯ ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ಉಪ್ಪಿನಂಗಡಿ ಪೊಲೀಸ್ ಠಾಣೆ, ಸುಳ್ಯ ಪೊಲೀಸ್ ಠಾಣೆ, ಬೆಳ್ಳಾರೆ ಪೊಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ವಾರೆಂಟ್ ಹೊಂದಿದ್ದು, ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಇದೀಗ ಈತನನ್ನು ಪುತ್ತೂರು ಗ್ರಾಮಾಂತರ ಠಾಣಾ ಎಸ್ಸೈ ನೇತೃತ್ವದ ಪೊಲೀಸ್ ತಂಡ ಕೇರಳದ ಮಲಪ್ಪುರಂ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Also Read  ಕಡಬ: 'ಝೂಬಿ ಗೋಲ್ಡ್' ವಿಸ್ತೃತ ಚಿನ್ನಾಭರಣ ಮಳಿಗೆ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್, ಲಕ್ಕೀ ಕೂಪನ್ ಡ್ರಾ

 

error: Content is protected !!
Scroll to Top