ವಿಟ್ಲ: ಅಪ್ರಾಪ್ತೆಯ ಅತ್ಯಾಚಾರ ಆರೋಪ* *➤ ಬಾಲಕಿಯ ಅಣ್ಣ ಸೇರಿದಂತೆ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 11. ಅಪ್ರಾಪ್ತ ಬಾಲಕಿಯೋರ್ವಳನ್ನು ಅತ್ಯಾಚಾರ ನಡೆಸಿದ್ದಲ್ಲದೆ, ಅವಳ ನಗ್ನ ಫೋಟೋಗಳನ್ನು ಮೊಬೈಲ್ ಮೂಲಕ ಚಿತ್ರೀಕರಣ ನಡೆಸಿ ಬ್ಲಾಕ್‍ ಮೇಲ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ವಿಟ್ಲ ಪೊಲೀಸರು ತಾಲೂಕಿನ ಬೋಳಂತೂರು ಗ್ರಾಮದ ನಿವಾಸಿಗಳಾದ ಅಬೂಬಕ್ಕರ್ ಸಿದ್ದೀಕ್ ಹಾಗೂ ಬಾಲಕಿಯ ಅಣ್ಣನನ್ನು ಬಂಧಿಸಿದ್ದಾರೆ.

ಅಪ್ರಾಪ್ತ ಪ್ರಾಯದ ಬಾಲಕಿಗೆ 2020 ರ ಜನವರಿ ತಿಂಗಳಲ್ಲಿ ನೆರೆಯ ಆರೋಪಿಗಳಾದ ಅಬೂಬಕ್ಕರ್ ಸಿದ್ದೀಕ್ ಮತ್ತು ಆತನ ಸ್ನೇಹಿತ ಚಪ್ಪಿ ಎಂಬವರುಗಳು ಫೋನ್ ಮುಖಾಂತರ ಪರಿಚಯವಾಗಿ ಸಲುಗೆಯಿಂದ ವರ್ತಿಸುತ್ತಿದ್ದರು. ಆರೋಪಿಗಳು 2020ರ ಜನವರಿ 25 ರಂದು ರಾತ್ರಿ ಬಾಲಕಿಯನ್ನು ಕರೆದೊಯ್ದು ಮನೆಯಂಗಳದಲ್ಲೇ ಅತ್ಯಾಚಾರಗೈದು ಬಾಲಕಿಯ ಖಾಸಗಿ ಫೋಟೊಗಳನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಲ್ಲದೇ ಈ ಕೃತ್ಯವನ್ನು ಯಾರಿಗಾದರೂ ತಿಳಿಸಿದ್ದಲ್ಲಿ ಪೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಬಳಿಕದ ದಿನಗಳಲ್ಲೂ ಆರೋಪಿಗಳು ಬಾಲಕಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಂಗಳವಾರದಂದು ಬಾಲಕಿಯ ಸಂಬಂಧಿಕರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಓರ್ವನಾದ ಆರೋಪಿ ಅಬೂಬಕ್ಕರ್ ಸಿದ್ದೀಕ್‍ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಚಪ್ಪಿ ಎಂಬಾತನ ಬಂಧನಕ್ಕೆತೆರಳಿದ್ದ ವೇಳೆ ಬಾಲಕಿಯ ಅಣ್ಣನು ಪೊಲೀಸರು ಬರುತ್ತಿರುವ ಮಾಹಿತಿ ನೀಡಿ ಆರೋಪಿಯನ್ನು ತಲೆಮರೆಸಿಕೊಳ್ಳಲು ಸಹಕರಿಸಿರುತ್ತಾನೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಬಾಲಕಿಯ ಅಣ್ಣನ ವಿರುದ್ದವೂ ಪೊಲೀಸರು ಕಲಂ 225 ಐಪಿಸಿ ಅಡಿ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Also Read  ಫೆಬ್ರವರಿಗೆ ರಾಜ್ಯದ ಅಂಗನವಾಡಿಗಳಲ್ಲಿ NEP ಜಾರಿ !! ➤  ಸಚಿವ ಬಿ.ಸಿ ನಾಗೇಶ್

 

 

error: Content is protected !!
Scroll to Top