ಕರಾವಳಿಯಲ್ಲಿ ಮತ್ತೆ ಚೂರಿ ಸದ್ದು ? ದೀಪಕ್ ಹತ್ಯೆ ಆರೋಪಿ ಪಿಂಕಿ ನವಾಜ್ ಅಟ್ಟಾಡಿಸಿ ಚೂರಿ ಇರಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.10. ಕಾಟಿಪಳ್ಳ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಜ್ ಮೇಲೆ ತಲವಾರು ದಾಳಿ ನಡೆದಿದೆ.

ಕಾಟಿಪಳ್ಳ ಸೆಕೆಂಡ್ ಕ್ರಾಸ್ ನಲ್ಲಿ ಬುಧವಾರ ಸಂಜೆ ನವಾಝ್ ನಿಂತಿದ್ದ ವೇಳೆ ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ತಲವಾರು ದಾಳಿ ನಡೆಸಿದೆ. ಘಟನೆಯಲ್ಲಿ ನವಾಜ್ ಓಡಿ ತಪ್ಪಿಸಿಕೊಂಡಿದ್ದು, ಬೆನ್ನು ಮತ್ತು ಕೈಗೆ ತೀವ್ರ ಗಾಯಗಾಳಾಗಿವೆ. ಬಳಿಕ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಹಾಡುಹಗಲೇ ಕಾಟಿಪಳ್ಳ ಪೇಟೆಯ ಬಳಿ ದೀಪಕ್ ರಾವ್ ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಇಂದು ದೀಪಕ್ ಕೊಲೆಯ ಪ್ರತೀಕಾರಕ್ಕಾಗಿ ಈ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.

Also Read  ಕಡಬ: ಧರೆ ಕುಸಿತ - ಕಟ್ಟಡಗಳು ಉರುಳುವ ಭೀತಿ ► ಸ್ಥಳೀಯ ನಿವಾಸಿಗಳ ಸ್ಥಳಾಂತರ

error: Content is protected !!
Scroll to Top