ಉಡುಪಿ: ಸರಕಾರಿ ಉದ್ಯೋಗದ ಹೆಸರಲ್ಲಿ ಆರೋಗ್ಯ ಸಹಾಯಕಿಗೆ ಲಕ್ಷಾಂತರ ರೂ. ವಂಚನೆ ➤ ಪ್ರಕರಣ ದಾಖಲು

(ನ್ಯೂಸ್ ಕಡಬ) newsladaba.com ಕಾರ್ಕಳ, ಫೆ. 10. ಸರಕಾರಿ ನೌಕರಿ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ವಂಚನೆಗೆ ಒಳಗಾದವರನ್ನು
ಜಯಮ್ಮ (64) ಎಂದು ಗುರುತಿಸಲಾಗಿದೆ. ಇವರು ನಿವೃತ್ತ ಆರೋಗ್ಯ ಸಹಾಯಕಿಯಾಗಿದ್ದು, ಅವರಿಗೆ 2019 ರಲ್ಲಿ ಬೆಳ್ತಂಗಡಿಯ ಮದುವೆ ಬ್ರೋಕರ್ ಲಕ್ಷ್ಮಿ ಹೊಳ್ಳ ಎಂಬವರ ಮೂಲಕ ಮಂಗಳೂರು ಕೋಟೆಕಾರ್ ನಿವಾಸಿ ಅಬ್ದುಲ್ ಖಾದರ್ ಎಂಬಾತ ಪರಿಚಯವಾಗಿದ್ದು, ಈತ ಜಯಮ್ಮ ಅವರ ಇಬ್ಬರು ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ಸುಳ್ಳು ಹೇಳಿ ಅವರಿಂದ 9,60,000 ರೂ. ಹಣವನ್ನು ಬ್ಯಾಂಕ್ ಖಾತೆ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೇ 5,00,000 ರೂ. ಹಣವನ್ನು ನೇರವಾಗಿ ಪಡೆದುಕೊಂಡಿದ್ದನು. ಆದರೆ ಇಲ್ಲಿಯವರೆಗೆ ಕೆಲಸವನ್ನೂ ಕೊಡಿಸದೆ ಅತ್ತ ಹಣವನ್ನೂ ಹಿಂತಿರುಗಿಸದೇ ವಂಚಿಸಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ► ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳೊಂದಿಗೆ ಮೂವರ ಬಂಧನ

error: Content is protected !!
Scroll to Top