? ಸುಬ್ರಹ್ಮಣ್ಯ ಹಾಗೂ ಪುತ್ತೂರು ಸೇರಿದಂತೆ 5 ಕಡೆ ವಾಹನ ಕಳ್ಳತನ ನಡೆಸಿದ ಆರು ಅಂತರ್ ಜಿಲ್ಲಾ ಕಳ್ಳರ ಬಂಧನ ➤ 44 ಲಕ್ಷ ರೂ. ಮೌಲ್ಯದ 20 ವಾಹನಗಳು ವಶ

(ನ್ಯೂಸ್ ಕಡಬ) newskadaba.com ಸಕಲೇಶಪುರ, ಫೆ. 10. ನಾಲ್ಕು ಚಕ್ರದ ವಾಹನಗಳನ್ನು ಕಳವು ಮಾಡುತ್ತಿದ್ದ 6 ಜನ ಕಳ್ಳರನ್ನು ಬಂಧಿಸಿ ಅವರಿಂದ 44 ಲಕ್ಷ ರೂ. ಬೆಲೆ ಬಾಳುವ 20 ವಾಹನಗಳನ್ನು ಸಕಲೇಶಪುರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಶಬ್ಬೀರ್, ಮೋಯ್ದು ಕುನ್ನಿ, ರಫೀಕ್, ಖಾದರ್ ಶರೀಫ್, ಸೈಯದ್ ಅಜ್ಮಲ್, ಮಹಮದ್ ಮುಬಾರಕ್ ಎಂದು ಗುರುತಿಸಲಾಗಿದೆ. ಹರಳಹಳ್ಳಿ ಗ್ರಾಮದ ಸತೀಶ್ ಎಂಬವರು ನೀಡಿದ ದೂರಿನಂತೆ ಮಾರುತಿ -800 ಕಾರನ್ನು 2018 ಮಾರ್ಚ್ 29 ರಂದು ಪುರಸಭೆ ಬಳಿ ನಿಲ್ಲಿಸಿ ಹಾಸನಕ್ಕೆ ಹೋಗಿ ವಾಪಸ್ಸು ಬಂದು ನೋಡಿದಾಗ ಕಾರು ಕಳವಾಗಿತ್ತು. ಈ ಬಗ್ಗೆ ಪತ್ತೆ ಮಾಡಿಕೊಡುವಂತೆ ದೂರು ನೀಡಿದ ಹಿನ್ನೆಲೆ ಸಕಲೇಶಪುರ ನಗರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು.

ಪೋಲಿಸರು ಬಾಳುಪೇಟೆಯಲ್ಲಿ ವಾಹನವನ್ನು ತಪಾಸಣೆ ನಡೆಸುತ್ತಿದ್ದ ಎಂದರ್ಭ ಹಾಸನದ ಕಡೆಯಿಂದ ಮಂಗಳೂರು ಕಡೆಗೆ ಹೋಗಲು ಮಾರುತಿ 800 ಕಾರು ನಂಬರ್ ಪ್ಲೇಟ್ ಇಲ್ಲದೇ ಬರುತ್ತಿರುವುದನ್ನು ಗಮನಿಸಿ ತಡೆದು ನಿಲ್ಲಿಸಿ, ವಾಹನದ ದಾಖಲಾತಿಯನ್ನು ತೋರಿಸುವಂತೆ ಸೂಚಿಸಿದಾಗ ಕಾರಿನಲ್ಲಿದ್ದ ಇಬ್ಬರು ವಾಹನದ ದಾಖಲಾತಿಯನ್ನು ಹಾಜರುಪಡಿಸಲು ವಿಫಲವಾಗಿದ್ದಾರೆ. ಈ ಸಂದರ್ಭ ಇಬ್ಬರು ವ್ಯಕ್ತಿಗಳನ್ನು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಹಲವು ಕೃತ್ಯಗಳು ಬೆಳಕಿಗೆ ಬಂದಿವೆ. ಈ ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಹಾಸನ, ಹೊಳೇನರಸೀಪುರ ಹಾಗೂ ಯಾತ್ರಾಸ್ಥಳವಾದ ಕುಕ್ಕೆಸುಬ್ರಹ್ಮಣ್ಯದಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರು ಪಾರ್ಕಿಂಗ್ ನಲ್ಲಿ ನಿಲ್ಲಿಸುತ್ತಿದ್ದ ಮಾರುತಿ ವ್ಯಾನ್, ಕಾರು ಹಾಗೂ ಬೊಲೇರೋ ವಾಹನಗಳು ಸೇರಿದಂತೆ ಇತರೆ ವಾಹನಗಳ ನಕಲಿ ಕೀಗಳನ್ನು ಬಳಸಿ ಕಳ್ಳತನಗೈದು, ಪ್ರಕರಣದ ಮತ್ತೊಬ್ಬ ಆರೋಪಿ ಮೈಸೂರು ಜಿಲ್ಲೆಯ ಕೆ.ಆರ್. ನಗರ ನಿವಾಸಿ ಅಪ್ರೋಚ್ ಖಾನ್ ನ ಮೂಲಕ ಇತರೆ ಗುಜರಿ ಅಂಗಡಿಗಳಲ್ಲಿದ್ದ ಅಪಘಾತದಲ್ಲಿ ಸಂಪೂರ್ಣ ಜಖಂಗೊಂಡ ವಾಹನಗಳ ಚಾರ್ಸಿ ನಂಬರ್ ಹಾಗೂ ಇಂಜಿನ್ ನಂಬರ್‌ ಗಳ ಸಹಿತ ಮಾರಾಟ ವಾಹನಗಳ ಮಾಲೀಕರು ನೀಡುತ್ತಿದ್ದ ವಾಹನ ವರ್ಗಾವಣೆಗೆ ಸಂಬಂಧಿಸಿದ ಫಾರಂ ನಂಬರುಗಳನ್ನು ಸಂಗ್ರಹಿಸಿ ಚಾರ್ಸಿ ನಂಬರ್‌ ಗಳನ್ನು ಕಳವು ಮಾಡಿದ ವಾಹನಗಳಿಗೆ ಪಂಚಿಂಗ್ ಮಾಡಿ, ವಾಹನಗಳಿಗೆ ವಿಮೆಯನ್ನು ಪಾವತಿಸಿ, ನೋಂದಣಿಗೊಂಡ ಆರ್.ಟಿ.ಓ ಕಛೇರಿಯ ಮೂಲಕ ದಾಖಲೆಗಳನ್ನು ಸಿದ್ದಪಡಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Also Read  ಪುತ್ತೂರು: 156 ವರ್ಷದ ಪ್ರಾಚೀನ ಕಟ್ಟಡ ನೆಲಸಮ ➤ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ


ಪತ್ತೆಯಾದ ಪ್ರಕರಣಗಳು:- ಸಕಲೇಶಪುರದಲ್ಲಿ 1 ಮಾರುತಿ 800 ಕಾರು, ಹಾಸನ ನಗರದಲ್ಲಿ 7 ಮಾರುತಿ ಓಮಿನಿ, ಹೊಳೆನರಸೀಪುರದಲ್ಲಿ 2 ಬೊಲೋರೊ ಪಿಕಪ್ ವಾಹನ, ಸುಬ್ರಮಣ್ಯದಲ್ಲಿ 2 ಮಾರುತಿ ಓಮ್ನಿ, ಪುತ್ತೂರು ನಗರದಲ್ಲಿ 4 ವಾಹನಗಳನ್ನು ಪತ್ತೆ ಮಾಡಿರುವುದಾಗಿ ತಿಳಿದು ಬಂದಿದೆ.

error: Content is protected !!
Scroll to Top