? ಬೆಳ್ತಂಗಡಿ: ಬಂಗಾರ್ ಪಲ್ಕೆ ಫಾಲ್ಸ್ ದುರಂತ ➤ 15 ದಿನಗಳ ಕಾರ್ಯಾಚರಣೆಯ ಬಳಿಕವೂ ಪತ್ತೆಯಾಗದ ಸನತ್ ಶೆಟ್ಟಿ ಮೃತದೇಹ…!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 10. ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಬಂಗಾರ್ ಪಲ್ಕೆ ಫಾಲ್ಸ್ ಬಳಿ ಜನವರಿ 25 ರಂದು ಉಂಟಾದ ಗುಡ್ಡ ಕುಸಿತದಿಂದಾಗಿ ಅಲ್ಲಿದ್ದ ನಾಲ್ಕು ಜನರಲ್ಲಿ ಮೂರು ಮಂದಿ ಪಾರಾಗಿ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ ಎಂಬಾತ ಕಣ್ಮರೆಯಾಗಿದ್ದ. ಆದರೆ ಆತನ ಮೃತದೇಹ ಪತ್ತೆಗಾಗಿ ಕಳೆದ ಹದಿನೈದು ದಿನಗಳಿಂದ ಎಸ್.ಡಿ.ಆರ್.ಎಫ್., ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳು ಅವಿರತವಾಗಿ ಹುಡುಕುವ ಪ್ರಯತ್ನಪಟ್ಟರೂ ಇಷ್ಟರವರೆಗೆ ಯಾವುದೇ ಸುಳಿವು ಸಿಗದಿರುವುದು ಎಲ್ಲರ ಅತಂಕಕ್ಕೆ ಕಾರಣವಾಗಿದೆ.


ಘಟನಾ ಸ್ಥಳಕ್ಕೆ ಯಾವುದೇ ಯಂತ್ರಗಳು ಹೋಗದೆ ಇದ್ದರೂ ಸ್ವಯಂ ಸೇವಕರ ಹಾಗೂ ಅಧಿಕಾರಿಗಳ ಪ್ರಯತ್ನದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಇತ್ತೀಚಿನ ಕೆಲ ದಿನಗಳಿಂದ ಜೆಸಿಬಿ ಮೂಲಕ ಕಾರ್ಯಚರಣೆ ನಡೆಸುತ್ತಿದ್ದರೂ ನಾಪತ್ತೆಯಾದ ವ್ಯಕ್ತಿಯ ದೇಹದ ಸುಳಿವು ನಿಗೂಢವಾಗಿಯೇ ಉಳಿದಿದೆ. ಇವತ್ತು ಸಿಗುತ್ತದೆ ನಾಳೆ ಸಿಗುತ್ತದೆ ಎಂಬ ದೊಡ್ಡ ಭರವಸೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲರಿಗೂ ನಿರಾಶರಾಗಿದ್ದಾರೆ. ಇಂದಿಗೆ 16 ನೇ ದಿನದ ಕಾರ್ಯಚರಣೆ ನಡೆಯುತ್ತಿದ್ದು, ಈ ಪ್ರಕರಣದ ಸಂಪೂರ್ಣ ಚಿತ್ರಣ ಸಿಗಲಿದೆ ಎನ್ನಲಾಗುತ್ತಿದೆ.

Also Read  ಮಡಿಕೇರಿ: ತಾಯಿಯ ಪ್ರಾಣ ಉಳಿಸಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ..!

error: Content is protected !!
Scroll to Top