ಕೆಸಿಎಫ್ ದಿನಾಚರಣೆ ಪ್ರಯುಕ್ತ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ದುಬೈ, ಫೆ. 10. ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಕೆಸಿಎಫ್ ದಿನಾಚರಣೆ ಪ್ರಯುಕ್ತ ಸ್ವಯಂ ಪ್ರೇರಿತವಾಗಿ ನಡೆದ ಬೃಹತ್ ರಕ್ತದಾನ ಶಿಬಿರವು ಸಲ್ಮಾನಿಯ ಮೆಡಿಕಲ್ ಸೆಂಟರ್ ನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಫೆಬ್ರವರಿ 5 ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಅಬ್ದುಲ್ ಖಾದರ್ ಉಸ್ತಾದ್ ರವರ ದುಃಆ ಮೂಲಕ ಆರಂಭಗೊಂಡ ಶಿಬಿರದಲ್ಲಿ ಕೆಸಿಎಫ್ ನ ಸದಸ್ಯರು ಮತ್ತು ಇಲ್ಲಿನ ಸ್ವದೇಶಿಗಳು ವಿದೇಶಿಯರು ಸೇರಿ ನೂರರಷ್ಟು ಮಿಕ್ಕ ರಕ್ತದಾನಿಗಳು ಭಾಗವಹಿಸಿದ್ದರು.

ಕೆಸಿಎಫ್ ಬಹರೈನ್ ನ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್, ಕಾರ್ಯದರ್ಶಿ ಹಾರಿಸ್ ಸಂಪ್ಯ, ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್ ಹಾಗೂ ಸಂಘಟನಾ ನೇತಾರರು, ಸದಸ್ಯರುಗಳು ರಕ್ತದಾನ ಮಾಡಿ ಮಾದರಿಯಾದರು.
ಕೆಸಿಎಫ್ ಬಹರೈನ್ ಸೌತ್ ಝೋನ್ ಇದರ ಸಂಘಟನಾ ವಿಭಾಗದ ಅಧ್ಯಕ್ಷರಾದ ಶಾಫಿ ಕಂಬಲಬೆಟ್ಟುರವರ ನೇತೃತ್ವದಲ್ಲಿ ನಡೆದ ಶಿಬಿರವು ಕೋವಿಡ್ ನ ಎಲ್ಲಾ ಮಾನದಂಡಗಳನ್ನು ಪಾಲಿಸಿ ಬಹಳ ಅಚ್ಚುಕಟ್ಟಾಗಿ ಶಿಸ್ತಿನಿಂದ ನಡೆಸಿದ ಕಾರ್ಯ ವೈಖರಿಯನ್ನು ಕಂಡು ಸಲ್ಮಾನಿಯ ಮೆಡಿಕಲ್ ಸೆಂಟರ್ ನ ಅಧಿಕಾರಿಗಳು ಸಂಘಟಕರನ್ನು ಪ್ರಶಂಶಿಸಿದರು.
ಶಿಬಿರದ ಉಸ್ತುವಾರಿಯನ್ನು ಕೆಸಿಎಫ್ ಬಹರೈನ್ ಇದರ ಸಾಂತ್ವನ ವಿಭಾಗದ ನೇತಾರರಾದ ಕರೀಮ್ ಮಾಝಾ, ಹನೀಫ್ ಜಿಕೆ ರವರು ವಹಿಸಿದ್ದರು. ಶಿಬಿರಾರ್ಥಿಗಳಿಗೆ ಬರಲು ವಾಹನ ಸೌಕರ್ಯಗಳನ್ನು ಒದಗಿಸಲಾಯಿತು ಹಾಗೂ ಬೆಳಗ್ಗಿನ ಲಘು ಫಲಹಾರ ಜೊತೆಗೆ ಹಣ್ಣು ಹಂಪಲು ವಿತರಿಸಲಾಯಿತು. ಪ್ರತೀ ರಕ್ತದಾನಿಗಳಿಗೆ ಕೆಸಿಎಫ್ ಬಹರೈನ್ ವತಿಯಿಂದ ಮೆಚ್ಚುಗೆ ಪ್ರಮಾಣ ಪತ್ರ ಗಳನ್ನು ನೀಡಲಾಯಿತು. ಶಿಬಿರದಲ್ಲಿ ಕೆಸಿಎಫ್ ಬಹರೈನ್ ನ ರಾಷ್ಟ್ರೀಯ, ಝೋನ್ ಮತ್ತು ಸೆಕ್ಟರ್ ಗಳ ನೇತಾರರೂ ಹಾಗೂ ಬಹರೈನ್ ನ ವಿವಿಧ ಸಂಘಟನೆಗಳ ನೇತಾರರೂ ಭಾಗವಹಿಸಿದ್ದರು.

Also Read  ಭಾರತಕ್ಕೆ ಕೊರೋನಾ ಕಂಟಕ ➤ ಒಂದೇ ದಿನ 6977 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

error: Content is protected !!
Scroll to Top