ಕಡಬ: ಮನೆಮಂದಿ ಮಲಗಿದ್ದ ವೇಳೆ ಒಳನುಗ್ಗಿದ ಕಳ್ಳರು ➤ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಕಡಬ, ಫೆ‌.09. ತಾಲೂಕಿನ ಕುಂತೂರು ಗ್ರಾಮದ ನೂಚಿಲ ನಿವಾಸಿ ಅನಿಸ್ ಎಂಬವರ ಮನೆಯ ಹಿಂದಿನ ಬಾಗಿಲಿನಿಂದ ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ.

ಮನೆಯಲ್ಲಿ ಮಲಗಿದ್ದ ಅನಿಸ್ ಅವರ ಪತ್ನಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಮಾಲೆ, ತಾಯಿ ಅವರ ಚಿನ್ನ,ತಾಯಿಯ ಕಾಲಲ್ಲಿದ್ದ ಚಿನ್ನವನ್ನು ತೆಗೆಯುವ ಸಂದರ್ಭ ಎಚ್ಚರಗೊಂಡಾಗ ಕಳ್ಳರು ಪರಾರಿಯಾಗಿದ್ದಾರೆ. ಸುಮಾರು 12 ಪವನ್ ಚಿನ್ನ ಕಳ್ಳತನವಾದ ಬಗ್ಗೆ ವರದಿಯಾಗಿದೆ. ಈ ಮನೆಯ ಪಕ್ಕದ ಸೈಮನ್ ಎಂಬವರ ಮನೆಯ ಬಾಗಿಲು ಒಡೆದು ಉಳನುಗ್ಗಿ ಮನೆಯಲ್ಲಿದ್ದ ಸುಮಾರು 5000 ರೂ ಕಳ್ಳತನಗೈದಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಅಗಮಿಸಿ ಪರಿಶೀಲನೆ ನಡೆಸಲಾಗಿದೆ. ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Also Read  ಉಡುಪಿ: ಕಾರ್ಕಳ 8ನೇ ಸುತ್ತು ➤ ಸುನೀಲ್ ಕುಮಾರ್ಗೆ ಮುನ್ನಡೆ

error: Content is protected !!
Scroll to Top