? ಮಂಗಳೂರು: ನಗರ ಪೊಲೀಸರಿಂದ ಸಂಚಾರ ನಿಯಮ ಉಲ್ಲಂಘನೆ ಕಾರ್ಯಾಚರಣೆ ➤ ಸುಮಾರು ಹತ್ತೂವರೆ ಲಕ್ಷ ರೂ. ದಂಡ ಸಂಗ್ರಹ…!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 09. ಸಂಚಾರ ನಿಯಮ ಉಲ್ಲಂಘನೆ ಕುರಿತು ಕಳೆದೆರಡು ದಿನಗಳಿಂದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಈ ವೇಳೆ ಒಟ್ಟು 2,207 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಇದರ ಪೈಕಿ 937 ಹೆಲ್ಮೆಟ್ ರಹಿತ ಸಂಚಾರ, 198 ದೋಷಯುಕ್ತ ನಂಬರ್ ಪ್ಲೇಟ್‌ ಹಾಗೂ 189 ಸೀಟ್‌ ಬೆಲ್ಟ್ ರಹಿತ ವಾಹನ ಚಲಾವಣೆ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ನಿಯಮ‌ ಉಲ್ಲಂಘಿಸಿದವರಿಂದ ಒಟ್ಟು 10.29 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದು, ಅಲ್ಲದೇ ಇನ್ನು ಕೂಡಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದಿದ್ದಾರೆ.

Also Read  ಸುಳ್ಯ ವಿಧಾನಸಭಾ ಕ್ಷೇತ್ರ ➤ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಜಯಭೇರಿ

error: Content is protected !!
Scroll to Top