? ರಾಜ್ಯದ 31ನೇ ಜಿಲ್ಲೆಯಾಗಿ ಸರಕಾರದಿಂದ ವಿಜಯನಗರ ಘೋಷಣೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 09. ವಿಜಯನಗರವನ್ನು ರಾಜ್ಯದ 31ನೇ ಜಿಲ್ಲೆಯಾಗಿ ಘೋಷಿಸಿ, ರಾಜ್ಯ ಸರಕಾರ ಸೋಮವಾರದಂದು ಅಧಿಕೃತ ರಾಜಪತ್ರ ಪ್ರಕಟಿಸಿದೆ.

ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ಆರು ತಾಲೂಕುಗಳನ್ನು ಒಳಗೊಂಡ ಪ್ರತ್ಯೇಕ ಜಿಲ್ಲೆಯನ್ನಾಗಿ ವಿಜಯನಗರವನ್ನು ಅಧಿಕೃತಗೊಳಿಸಲಾಗಿದೆ. ಈ ನೂತನ ಜಿಲ್ಲೆಯಲ್ಲಿ ಹೂವಿನ ಹಡಗಲಿ, ಹಗರಿ ಬೊಮ್ಮನಹಳ್ಳಿ, ಹೊಸಪೇಟೆ, ಕೊಟ್ಟೂರು, ಹರಪನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕುಗಳಿರಲಿವೆ. ಜಿಲ್ಲಾ ಕೇಂದ್ರವಾಗಿ ಹೊಸಪೇಟೆಯನ್ನು ಘೋಷಿಸಲಾಗಿದೆ.

Also Read  ಮೊಬೈಲ್ ಕಳ್ಳತನ ಮಾಡುತ್ತಿದ್ದ ಗುಂಪು ಪೊಲೀಸರ ವಶಕ್ಕೆ

error: Content is protected !!
Scroll to Top