? ಪುಳಿಕುಕ್ಕು ತಲುಪಿದ ಕಾಡಾನೆ ? ಕಡಬ ಕಡೆಗೆ ಸಂಚರಿಸುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಸುಳ್ಯ ತಾಲೂಕಿನ ಪಂಬೆತ್ತಾಡಿ ಕಾಡಿನಿಂದ ಸೋಮವಾರ ರಾತ್ರಿ ಕಡಬ ಕಡೆಗೆ ಹೊರಟಿದ್ದ ಕಾಡಾನೆಯು ಪಳಿಕುಕ್ಕು ಅರಣ್ಯ ಪ್ರದೇಶಕ್ಕೆ ತಲುಪಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ದಿನ ರಾತ್ರಿ ಆನೆಯು ಪಂಬೆತ್ತಾಡಿಯಿಂದ ಹೊರಟಿದ್ದು, ಪಂಜ ಮೂಲಕ ಪುಳಿಕುಕ್ಕು ಕಡೆಗೆ ಸಂಚರಿಸಿದೆ. ಆನೆಯು ಪ್ರತೀ ವರ್ಷ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಈ ಹಿಂದಿನ ವರ್ಷ ಕೂಡಾ ಪುಳಿಕುಕ್ಕು ಕಾಡಿನಲ್ಲಿ ಒಂದು ದಿನ ವಾಸವಾಗಿತ್ತು. ಹಗಲು ಹೊತ್ತಿನಲ್ಲಿ ಈ ಆನೆಯು ಸಂಚರಿಸುವ ಸಾಧ್ಯತೆ ವಿರಳವಾಗಿದ್ದು, ಪುಳಿಕುಕ್ಕು ಕಾಡಿನಲ್ಲೇ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಆದರೂ ಕಡಬ ಕಡೆಗೆ ಸಂಚರಿಸಲೂ ಬಹುದಾಗಿದ್ದು, ಪುಳಿಕುಕ್ಕು ಮಾರ್ಗವಾಗಿ ಸಂಚರಿಸುವವರು ಎಚ್ಚರದಿಂದ ಇರುವಂತೆ ಹಾಗೂ ಜಾಗರೂಕತೆಯಿಂದ ಸಂಚರಿಸುವಂತೆ ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

Also Read  ಬೆಳ್ಳಾರೆ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ಬಂಧನ ➤ ಆರೋಪಿಯ ಗೂಡಂಗಡಿಗೆ ಬೆಂಕಿ

error: Content is protected !!
Scroll to Top