ಪಂಜದಿಂದ ಕಡಬ ಕಡೆಗೆ ಹೊರಟ ಕಾಡಾನೆ ? ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಫೆ.08. ವರ್ಷಂಪ್ರತಿ ಕಡಬ ಮೂಲಕ ಪಂಜ ಕಡೆಗೆ ತೆರಳುವ ಆನೆಯು ಕಳೆದ ಕೆಲವು ಸಮಯಗಳ ಹಿಂದೆ ಸುಳ್ಯ ತಾಲೂಕಿಗೆ ತೆರಳಿದ್ದು, ಕಳೆದ ರಾತ್ರಿ ಪಂಬೆತ್ತಾಡಿ ಕಾಡಿನಲ್ಲಿ ಆನೆ ಇರುವುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದರು.

ಇಂದು ರಾತ್ರಿ ಆನೆಯು ಪಂಬೆತ್ತಾಡಿಯಿಂದ ಹೊರಟಿದ್ದು, ಪಂಜ ಮೂಲಕ ಪುಳಿಕುಕ್ಕು ಕಡೆಗೆ ಸಂಚರಿಸಿದೆ. ಆನೆಯು ಪ್ರತೀ ವರ್ಷ ಅದರದ್ದೇ ಆದ ದಾರಿ ಸಂಚರಿಸುತ್ತಿದ್ದು, ಇಂದು ಕೂಡಾ ಆನೆಯು ಕಡಬ ಹಳೇಸ್ಟೇಷನ್ ಮೂಲಕ ಹಾದುಹೋಗುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಆನೆ ಸಂಚರಿಸುವ ಹಿನ್ನೆಲೆಯಲ್ಲಿ ಪರಿಸರ ವಾಸಿಗಳು ಎಚ್ಚರದಿಂದ ಇರುವಂತೆ ಹಾಗೂ ಜಾಗೃತೆಯಿಂದ ಸಂಚರಿಸುವಂತೆ ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್ ‘ನ್ಯೂಸ್ ಕಡಬ’ದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Also Read  ಅಂತರ್ ರಾಜ್ಯ ಮಟ್ಟದ ವಚನ ರಚನಾ ಸ್ಪರ್ಧೆ ➤ ಕಡಬದ ಸಮ್ಯಕ್ ಜೈನ್ ಪ್ರಥಮ

 

 

error: Content is protected !!
Scroll to Top