ಪುತ್ತೂರು: ಫಾರ್ಮ್ ಹೌಸ್‌ನಲ್ಲಿ ತಂಗಿದ್ದ ಯುವತಿಯ ಅತ್ಯಾಚಾರ ? ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.08. ಸ್ನೇಹಿತರೊಬ್ಬರ ಬೀಳ್ಕೊಡುಗೆ ಪಾರ್ಟಿಗೆಂದು ಬಂದಿದ್ದ ಯುವತಿಯ ಮೇಲೆ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಜಾರ್ಖಂಡ್‌ ಮೂಲದ ಯುವತಿ ಮಂಗಳೂರಿನ ಬ್ಯಾಂಕ್‌ವೊಂದರಲ್ಲಿ ಉದ್ಯೋಗದಲ್ಲಿದ್ದು, ತನ್ನ ಸ್ನೇಹಿತ ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾಯಿಲಿನ್ ಪಿಂಟೋ ಎಂಬವರಿಗೆ ಅಂಡಮಾನ್ ಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಫೆಬ್ರವರಿ 05 ರಂದು ರಾತ್ರಿ ಬೀಳ್ಕೊಡುಗೆ ಪಾರ್ಟಿಗೆಂದು ಕೊಡಿಪ್ಪಾಡಿಯ ಫಾರ್ಮ್ ಹೌಸ್‌ಗೆಂದು ಬಂದಿದ್ದರು ಎನ್ನಲಾಗಿದೆ. ರಾತ್ರಿ ಪಾರ್ಟಿ ಮುಗಿದ ಬಳಿಕ ಯುವತಿ ಸೇರಿದಂತೆ ನಾಲ್ವರು ಅಲ್ಲೇ ತಂಗಿದ್ದು, ಫೆಬ್ರವರಿ 06 ರಂದು ಯುವತಿಯ ಮೇಲೆ ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತ ಬಲಾತ್ಕಾರವಾಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ನೊಂದ ಯುವತಿಯು ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Also Read  ತುನಿವು ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿದ್ದ ಯುವಕ ➤ ಲಾರಿ ಮೇಲಿಂದ ಜಾರಿ ಬಿದ್ದು ಮೃತ್ಯು..!!

 

error: Content is protected !!
Scroll to Top