? ಬುಲೆಟ್ ಹಾಗೂ ಕಾರು ನಡುವೆ ಅಪಘಾತ ➤ ಉಳ್ಳಾಲ ಎ.ಎಸ್.ಐ ಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 08. ಬುಲೆಟ್ ಬೈಕ್ ಹಾಗೂ ಕಾರು ನಡುವೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರ ಉಳ್ಳಾಲ ಪೊಲೀಸ್ ಠಾಣೆಯ ಎ.ಎಸ್.ಐ ಅವರು ಗಂಭೀರ ಗಾಯಗೊಂಡ ಘಟನೆ ರಾ.ಹೆ. 66 ರ ಕೊಲ್ಯ ದುರ್ಗಾಂಬ ಗ್ಯಾರೇಜ್ ಬಳಿ ನಡೆದಿದೆ.

ಗಾಯಗೊಂಡವರನ್ನು ಉಳ್ಳಾ ಠಾಣಾ ಎ.ಎಸ್.ಐ ಶೇಖರ್ ಗಟ್ಟಿ ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟು ಕಡೆಯಿಂದ ತನ್ನ ಮಕ್ಕಳ ಜೊತೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕೇರಳ ನೋಂದಣಿಯ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಶೇಖರ್ ಗಟ್ಟಿ ಅವರು ಕಾಲು ಮುರಿತಕ್ಕೊಳಗಾಗಿದ್ದಾರೆ. ಅವರನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇಖರ್ ಗಟ್ಟಿ ಅವರ ಪುಟ್ಟ ಮಕ್ಕಳಾದ ಆಯುಷ್ ಮತ್ತು ಅನುಷ್ ಜೊತೆಯಲ್ಲಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಅ.22: ತೆಗೆರ್ ತುಳುಕೂಟದಿಂದ ದೀಪಾವಳಿ ಪ್ರಯುಕ್ತ ► ರೆಂಜಿಲಾಡಿಯಲ್ಲಿ 'ಬೆನ್ನಿದ ಕಂಡೊಡ್ ನಮ್ಮ ಜವನೆರ್' ಕಾರ್ಯಕ್ರಮ

error: Content is protected !!
Scroll to Top