ಸುಳ್ಯ: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸಜ್ಜನೋತ್ಸವ ಹಾಗೂ ನೂತನ ಸಭಾಭವನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 08. ತಾಲ್ಲೂಕಿನ ಸಂಪಾಜೆ ಗ್ರಾಮದಲ್ಲಿ ಹಲವಾರು ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಾನವ ಸಂಪನ್ಮೂಲದ ರಾಜ್ಯ ಉಪಾಧ್ಯಕ್ಷ ರಾದ ಡಾ. ಉಮ್ಮರ್ ಬೀಜದಕಟ್ಟೆಯವರ ಸಜ್ಜನ ಪ್ರತಿಷ್ಠಾನದ ವತಿಯಿಂದ ಗೂನಡ್ಕ ಬೀಜದಕಟ್ಟೆ ಎಂಬಲ್ಲಿ ಸಭಾಭವನ ಉದ್ಘಾಟನೆ ಮತ್ತು ಸಜ್ಜನೋತ್ಸವವು ಫೆ.6ರಂದು ನಡೆಯಿತು.

ಮರ್ಹೂಂ ಸೈದು ಹಾಜಿ ಸಭಾಭವನವನ್ನು ಡಾ.ಉಮ್ಮರ್ ರವರ ಮಾತೃಶ್ರೀ ಪಾತುಮ್ಮ ಹಜ್ಜುಮ್ಮ
ರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಡಾ.ಉಮ್ಮರ್ ವಹಿಸಿದರು. ಮುಖ್ಯ ಆತಿಥಿಗಳಾಗಿ ಆಗಮಿಸಿದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇತಂಹ ಅತ್ಯುತ್ತಮ ಸಭಾಭವನ ನಿರ್ಮಿಸಿ ಸಾಹಿತ್ಯಗಳನ್ನು ಒಗ್ಗೂಡಿಸಿ ಸಜ್ಜನೋತ್ಸವವನ್ನು ಮಾಡುವಂತಹ ಕಾರ್ಯ ಶ್ಲಾಘನೀಯ ಎಂದರು. ವಿವಿಧ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಾಹಿತಿಗಳಿಂದ ವಿಚಾರಗೋಷ್ಟಿ ನಡೆಯಿತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮೀ, ನಂಜನಗೂಡು ತಹಶೀಲ್ದಾರ್ ಕುಂಞ ಅಹಮದ್, ನಿವೃತ್ತ ಅಧಿಕಾರಿ ಇಬ್ರಾಹಿಂ ಗೂನಡ್ಕ, ತಾಲ್ಲೂಕು ಪಂಚಾಯತ್ ಸದಸ್ಯೆ ಪುಷ್ಪ ಮೇದಪ್ಪ, ನಟರಾಜ್ ಬೆಂಗಳೂರು, ಟಿ.ಎಮ್.ಶಹೀದ್, ಸೋಮಶೇಖರ ಕೈೂಂಗಾಜೆ, ಕೆ.ಪಿ.ಜಗದೀಶ್, ಶರೀಫ್ ಜಟ್ಟಿಪಳ್ಳ, ಅಶ್ರಫ್ ಟರ್ಲಿ, ರಹೀಂ ಬೀಜದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಮಹಮ್ಮದ್ ಕುಂಞ ಗೂನಡ್ಕ ಸ್ವಾಗತಿಸಿ, ಮುಸ್ತಫಾ ಸುಳ್ಯ ಕಾರ್ಯಕ್ರಮ ನಿರೂಪಣೆಗೈದರು.

Also Read  ಕೃಷಿ ಸಚಿವರ ವಿರುದ್ಧ ಆರೋಪ- ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸರಕಾರ ತೀರ್ಮಾನ

error: Content is protected !!
Scroll to Top