? ಕಾಡು‌ಹಂದಿ ಬೇಟೆಗೆ ಇಟ್ಟಿದ್ದ ನಾಡಬಾಂಬ್ ತಿಂದು ಹಸು ಸಾವು..!



(ನ್ಯೂಸ್ ಕಡಬ) newskadaba.com ಕೋಲಾರ,‌ಫೆ. 07. ಕಾಡು ಹಂದಿಯ ಬೇಟೆಗೆಂದು ಇಟ್ಟಿದ್ದ ನಾಡಬಾಂಬ್ ಒಂದನ್ನು ಹಸುವೊಂದು ತಿಂದ ಪರಿಣಾಮ ಹಸುವಿನ ಬಾಯಿ ಛಿದ್ರಗೊಂಡು ಹಸು ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.





ಹಸುವು ಮೇಯಲು ಹೋಗಿದ್ದ ಸಮಯದಲ್ಲಿ ಕಾಡು ಹಂದಿಗೆಂದು ಇಡಲಾದ ನಾಡ ಬಾಂಬ್ ಒಂದನ್ನು ತಿಂದಿದ್ದು, ಈ ವೇಳೆ ಸ್ಫೋಟಕ ಬಾಯಿಯಲ್ಲಿಯೇ ಸ್ಫೋಟಗೊಂಡ ಪರಿಣಾಮ ಹಸುವು ನರಳಿ ನರಳಿ ಸ್ಥಳದಲ್ಲಿ ಅಮಾನವೀಯವಾಗಿ ಸಾವನ್ನಪ್ಪಿದೆ. ಹಸುವು ಹುಲ್ಲಿನೊಂದಿಗೆ ನಾಡಬಾಂಬ್ ನ್ನು ತಿಂದಿದೆ ಎಂದು ಹೇಳಲಾಗಿದೆ. ಈ ಹಸುವಿನ ಮೌಲ್ಯ ಸುಮಾರು 1 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top