ದ.ಕ ಜಿಲ್ಲಾ ಕಮಾಂಡೆಂಟ್ ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 07. ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು  ಇವರ ಹೆಸರನ್ನು ಮಾನ್ಯ ಆರಕ್ಷಕ ಮಹಾನಿರ್ದೇಶಕರು ಗೃಹರಕ್ಷಕ ದಳದ ಮಹಾಸಮಾದೇಷ್ಟರು ಮತ್ತು ನಿರ್ದೇಶಕರು, ಪೌರರಕ್ಷಣೆ, ಬೆಂಗಳೂರು ರವರು ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಶಿಫಾರಸ್ಸು ಮಾಡಿದ್ದು, ಸದರಿಯವರಿಗೆ 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿರುತ್ತದೆ.

ಶ್ರೀಯುತರು ದಿನಾಂಕ: 06-01-2015 ರಲ್ಲಿ ಇಲಾಖೆಗೆ ಸಮಾದೇಷ್ಟರಾಗಿ ಸೇರ್ಪಡೆಗೊಂಡು 2020 ರಲ್ಲಿ ಎರಡನೇ ಅವಧಿಯಾಗಿ ಅವರನ್ನು ಸಮಾದೇಷ್ಟರನ್ನಾಗಿ ನೇಮಿಸಲಾಗಿರುತ್ತದೆ.  ಕಳೆದ 6 ತಿಂಗಳಿನಿಂದ ಪೌರರಕ್ಷಣಾ ಪಡೆಯ ಚೀಫ್ ವಾರ್ಡನ್ ಆಗಿ ಹೆಚ್ಚುವರಿಯಾಗಿ ನೇಮಿಸಲಾಗಿರುತ್ತದೆ. ಇವರು ಗೃಹರಕ್ಷಕ ಸಂಸ್ಥೆಗೆ ಸೇರಿದಾಗಿನಿಂದ ಇಲ್ಲಿಯವರೆಗೆ ವನಮಹೋತ್ಸವ, ಯೋಗ ಮತ್ತು ಪ್ರಾಣಾಯಾಮ ತರಬೇತಿ, ಬೀಚ್ ಸ್ವಚ್ಛತಾ ಅಭಿಯಾನ,  ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರ, ನೇತ್ರ ತಪಾಸಣಾ ಶಿಬಿರ, ಹೃದಯ ತಪಾಸಣಾ ಶಿಬಿರ, ಉತ್ತಮ ಸೇವೆ ಸಲ್ಲಿಸಿದ ಗೃಹರಕ್ಷಕರಿಗೆ ಸನ್ಮಾನ ಕಾರ್ಯಕ್ರಮ, ಕೊರೋನಾ ಜಾಗೃತಿ ಕಾರ್ಯಕ್ರಮ ಹಾಗೂ ರಸ್ತೆ ಸುರಕ್ಷಾ ಜಾಗೃತಿ ಕಾರ್ಯಕ್ರಮ ಇಂತಹ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗೃಹರಕ್ಷಕ ಇಲಾಖೆಗೆ ಹೊಸ ಚೈತನ್ಯವನ್ನು ತು

Also Read  ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

 

error: Content is protected !!
Scroll to Top