? ಆಟವಾಡುತ್ತಿದ್ದ ವೇಳೆ ಅಡಿಕೆ ನುಂಗಿ ಮಗು ಮೃತ್ಯು



(ನ್ಯೂಸ್ ಕಡಬ) newskadaba.com ತೀರ್ಥಹಳ್ಳಿ, ಫೆ. 06. ಮನೆಯಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಹಸುಗೂಸೊಂದು ಅಡಿಕೆ ನುಂಗಿ ಮೃತಪಟ್ಟ ಘಟನೆ ತಾಲೂಕಿನ ಹೆದ್ದೂರು ಗ್ರಾಮದಲ್ಲಿ ನಡೆದಿದೆ.






ಅರ್ಚನಾ ಹಾಗೂ ಸಂದೇಶ್ ದಂಪತಿಯ ಎಂಬ ಒಂದು ವರ್ಷದ ಶ್ರೀಹಾನ್ ಮೃತಪಟ್ಟ ಮಗು. ಮಗುವು ಆಟವಾಡುತ್ತಿದ್ದ ವೇಳೆ ಅಂಗಳದಲ್ಲಿದ್ದ ಅಡಿಕೆ ನುಂಗಿ ಉಸಿರುಗಟ್ಟಿ ಮೃತಪಟ್ಟಿದೆ. ಅಡಿಕೆ ನುಂಗಿದ ತಕ್ಷಣವೇ ಮಗುವನ್ನ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲೇ ಅಸುನೀಗಿದೆ. ಮಗುವಿನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.






error: Content is protected !!
Scroll to Top