ರಕ್ತದಾನದಿಂದ ಭಾತೃತ್ರ ವೃದ್ದಿಸುತ್ತದೆ ➤ ಡಾ. ರಾಜೇಂದ್ರ ಪ್ರಸಾದ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 06. ರಕ್ತದಾನ ಶ್ರೇಷ್ಠದಾನ. ರಕ್ತಕ್ಕೆ ಪರ್ಯಾಯವಾದ ವಸ್ತು ಇನ್ನೊಂದಿಲ್ಲ. ರಕ್ತದಾನದಿಂದಲೇ ರಕ್ತದ ಕೊರತೆಯನ್ನು ನೀಗಿಸಲು ಸಾದ್ಯವಾಗುತ್ತದೆ. ಈ ಕಾರಣದಿಂದ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡಬೇಕು, ರಕ್ತದಾನದಿಂದ ವೈದ್ಯರ ಕೆಲಸ ಸುಲಭವಾಗುತ್ತದೆ. ರಕ್ತದಾನದಿಂದ ಸಹೋದರತ್ವ ವೃದ್ದಿಸಿ ಭಾತೃತ್ವ ವೃದ್ದಿಸುತ್ತದೆ. ಕೋವಿಡ್ ಸಂಕಷ್ಟದ ದಿನಗಳಲ್ಲಿ ರಕ್ತದ ಕೃತಕ ಅಭಾವ ಉಂಟಾಗಿದ್ದು, ಎಲ್ಲರೂ ರಕ್ತದಾನ ಮಾಡುವುದರ ಮುಖಾಂತರ ಈ ಕೊರತೆಯನ್ನು ನೀಗಿಸಬಹುದು ಎಂದು ಮಂಗಳೂರು ಹವ್ಯಕ ಮಹಾಸಭಾದ ಉಪಾಧ್ಯಕ್ಷರಾದ ಡಾ|| ರಾಜೇಂದ್ರ ಪ್ರಸಾದ್ ಅವರು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶ್ರೀ ಭಾರತೀ ಸಮೂಹ ಸಂಸ್ಥೆಗಳು, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮತ್ತು ಮಂಗಳೂರು ಹವ್ಯಕ ಸಭಾ ಇವರ ಜಂಟಿ ಆಶ್ರಯದಲ್ಲಿ, ತೇಜಸ್ವಿನಿ ಆಸ್ಪತ್ರೆಯ ಸಹಯೋಗದೊಂದಿಗೆ, ಶ್ರೀ ಭಾರತೀ ಕಾಲೇಜು, ನಂತೂರು ಇಲ್ಲಿ ಫೆ.05 ರಂದು ರಕ್ತದಾನ ಶಿಬಿರ ಜರುಗಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್ ದಾಸ್ ರಕ್ತದಾನದ ಮಹತ್ವವನ್ನು ವಿವರಿಸಿದರು. ತೇಜಸ್ವಿನಿ ಆಸ್ಪತ್ರೆಯ ವೈದ್ಯರಾದ ಡಾ|| ಶ್ರವಣ್, ಹವ್ಯಕ ಸಭಾ ಮಂಗಳೂರು ಇದರ ಸದಸ್ಯರಾದ ಅನಿತಾ ಬೋಳಂತಕೋಡಿ, ಗೀತಾದೇವಿ ಚೂಂತಾರು, ಹವ್ಯಕ ಸಭಾ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ಶ್ರೀಕೃಷ್ಣ ನೀರಮೂಲೆ, ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ಶ್ರೀ ಉದಯಶಂಕರ ನೀರ್ಪಾಜೆ , ಶ್ರೀ ಭಾರತೀ ಕಾಲೇಜಿನ ಉಪಪ್ರಾಂಶುಪಾಲೆ ಗಂಗಾರತ್ನ ಉಪಸ್ಥಿತರಿದ್ದು, ತೇಜಸ್ವಿನಿ ಆಸ್ಪತ್ರೆಯ ವ್ಯೆದ್ಯರು ಈ ಶಿಬಿರ ನಡೆಸಲು ಸಹಕಾರ ನೀಡಿದರು. ಸುಮಾರು 20ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

Also Read  ದ.ಕ ಜಿಲ್ಲೆಯ ವಿವಿಧ ವೈದ್ಯಕೀಯ ಕಾಲೇಜುಗಳ ಸಹಯೋಗ ➤ ಇಂದಿನಿಂದ ವಿಶೇಷ ಆರೋಗ್ಯ ತಪಾಸಣಾ ಶಿಬಿರ

 

error: Content is protected !!
Scroll to Top