ಗುತ್ತಿಗಾರು- ಸುಬ್ರಹ್ಮಣ್ಯ ಅವೈಜ್ಞಾನಿಕ ವಿದ್ಯುತ್ ಕೇಬಲ್ ಅಳವಡಿಕೆ ➤ ಕಾಂಗ್ರೆಸ್ ಆರೋಪ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 06. ಗುತ್ತಿಗಾರಿನಿಂದ ಸುಬ್ರಹ್ಮಣ್ಯದವರಿಗೆ 110ಕೆ.ವಿ ವಿದ್ಯುತ್ ಭೂಗತ ಕೇಬಲ್ ಅಳವಡಿಕೆ ಅವೈಜ್ಙಾನಿಕ ರೀತಿಯಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪರಶುರಾಮ ಚಿಲ್ತಡ್ಕ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಆರು ತಿಂಗಳಿನಿಂದ ರಸ್ತೆ ಬದಿ ಭೂಮಿಯನ್ನು ಅಗೆದು ಅರ್ಧದಲ್ಲಿ ಬಿಟ್ಟಿದ್ದು, ಸಾರ್ವಜನಿಕ ನಡೆದಾಡಲು ಸಾಧ್ಯವಾಗುವುದಿಲ್ಲ, ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಜಯಪ್ರಕಾಶ್ ರೈ, ತಾಲೂಕು ಸಂಘಟನ ಕಾರ್ಯದರ್ಶಿ ದಿನೇಶ್ ಸರಸ್ವತಿ ಮಹಲ್ ಹಾಗೂ ಕಾಂಗ್ರೆಸ್ ಯುವನಾಯಕ ಸನತ್ ಮುಳುಗಾಡು ಮೊದಲಾದವರು ಉಪಸ್ಥಿತರಿದ್ದರು.

Also Read  ಏರೋನಿಕ್ಸ್ ಕಂಪನಿ ಸಿಇಒ ಮತ್ತು ಎಂಡಿ ಹತ್ಯೆ ಪ್ರಕರಣ- ಮೂವರ ಬಂಧನ

error: Content is protected !!
Scroll to Top