ಆಟೋರಿಕ್ಷಾ ಮುಂಬದಿ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 06. ಮಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಮಂಗಳೂರು ನಗರ ವ್ಯಾಪ್ತಿಯೊಳಗೆ ತುರ್ತು ಸಂದರ್ಭದಲ್ಲಿ, ರೋಗಿಗಳನ್ನು ಹಾಗೂ ವಯೋ ವೃದ್ಧರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಬಂದು ಹೋಗುವಾಗ ಮತ್ತು ನಗರದೊಳಗೆ ಪ್ರಯಾಣಿಕರನ್ನು ಅವರು ಹೇಳಿರುವ ಸ್ಥಳಗಳಿಗೆ ತಲುಪಿಸುವಂತಹಾ ಆಟೋರಿಕ್ಷಾಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಈಗಾಗಲೇ ನಿರ್ಣಯಿಸಿರುವಂತೆ ಆಟೋರಿಕ್ಷಾ ಮುಂಬದಿ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿ (ಬಜಾಜ್ ಗ್ರೀನ್) ಕಡ್ಡಾಯವಾಗಿ ಬಳಿದು ಪ್ರದರ್ಶಿಸಬೇಕೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನಿರ್ದೇಶಿಸಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು  ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಕಲ್ಲಡ್ಕ ಭಟ್ ಅಧೀನದ ಶಾಲಾ ಅನುದಾನ ರದ್ದು ► ರಾಜ್ಯ ಸರಕಾರದ ವಿರುದ್ಧ ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

error: Content is protected !!
Scroll to Top