ಬೆಳಂದೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕನಿಗೆ ಧನಸಹಾಯ

(ನ್ಯೂಸ್ ಕಡಬ) newskadaba.com ಕಾಣಿಯೂರು, ಫೆ. 06. ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳಂದೂರು ಗ್ರಾಮದ ಪಟ್ಟೆ ರಾಜೇಶ್ ಗೌಡ ಎಂಬವರ ಚಿಕಿತ್ಸೆಗೆ ಪಳ್ಳತ್ತಾರು ಹಾಗೂ ಬೆಳಂದೂರು ಮುಸ್ಲಿಂ ಯುವಕರ ವತಿಯಿಂದ 10000 ರುಪಾಯಿ ಧನಸಹಾಯವನ್ನು ರಾಜೇಶ್ ಗೌಡ ಪಟ್ಟೆಯವರ ಕುಟುಂಬಿಕರಿಗೆ ಹಸ್ತಾಂತರಿಸಲಾಯಿತು.

ಅಪಘಾತದಲ್ಲಿ ಗಂಭೀರ ಗಾಯಗೊಂಡು ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ ರಾಜೇಶನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು ಮತ್ತೊಮ್ಮೆ ಈ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬೆಳಂದೂರು ಜಮಾಅತ್ ಅಧ್ಯಕ್ಷ ಇಬ್ರಾಹಿಂ ಹಾಜಿ, ಕಾರ್ಯದರ್ಶಿ ನವಾಝ್ ಸಖಾಫಿ, ನಝೀರ್ ದೇವಸ್ಯ, ಇಸ್ಮಾಯಿಲ್ ಕೊಡೆಂಕಿರಿ, ಹಾಗೂ ಅಬ್ದುಲ್ಲ ಬೆಳಂದೂರು ಮೊದಲಾದವರು ಉಪಸ್ಥಿತರಿದ್ದರು.

Also Read  ಬೆಳ್ತಂಗಡಿ: 'ಸಿದ್ದರಾಮಯ್ಯರಿಂದ 24 ಹಿಂದೂಗಳ ಹತ್ಯೆ' ➤ ವಿವಾದಾತ್ಮಕ ಹೇಳಿಕೆ ನೀಡಿದ ಪೂಂಜಾ

error: Content is protected !!
Scroll to Top