?ದಾಖಲೆಗಳಿಲ್ಲದ ಸುಮಾರು 1.47 ಕೋಟಿ ರೂ ಸಾಗಾಟ..! ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ದಾವಣಗೆರೆ, ಫೆ. 06. ದಾವಣಗೆರೆ, ಫೆ. 06. ದಾಖಲೆ ಇಲ್ಲದೇ ಕಾರಿನಲ್ಲಿ ಶುಕ್ರವಾರ ರಾತ್ರಿ ಅಕ್ರಮವಾಗಿ ಸಾಗಿಸುತ್ತಿದ್ದ 1.47 ಕೋಟಿ ರೂ. ಅನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಮೂವರನ್ನು ಬಂಧಿಸಿದ ಘಟನೆ ನಗರದ ಕೆ.ಆರ್.ರಸ್ತೆ ಗ್ಯಾಲಕ್ಸಿ ಶಾದಿ ಮಹಲ್ ಬಳಿ ನಡೆದಿದೆ.

ಬಂಧಿತ ಆರೋಪಿಗಳನ್ನು ಕಲಬುರ್ಗಿ ನಿವಾಸಿಗಳಾದ ಶ್ರೀಕಾಂತ್ (26), ಮಹೇಶ್ (23) ಹಾಗೂ ಕಾರಿನ ಚಾಲಕ ಬೀರಲಿಂಗ (25) ಎಂದು ಗುರುತಿಸಲಾಗಿದೆ. ಕಲಬುರ್ಗಿಯಿಂದ ದಾವಣಗೆರೆಗೆ ಬರುತ್ತಿದ್ದ ಕಾರನ್ನು ಉತ್ತರ ಸಂಚಾರ ಠಾಣೆಯ ಎಎಸ್‌.ಐ ಜಗನ್ನಾಥ್ ಹಾಗೂ ತಂಡ ತಡೆದು ತಪಾಸಣೆ ನಡೆಸಿದಾಗ ಮೂರು ಬ್ಯಾಗ್‌ ಗಳಲ್ಲಿ ಹಣ ಪತ್ತೆಯಾಗಿದೆ. ಹಣದ ಬಗ್ಗೆ ದಾಖಲೆ ಕೇಳಿದಾಗ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಆರೋಪಿಗಳನ್ನು ಆಜಾದ್ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುರಕ್ಷಾದಲ್ಲಿ ದಂತ ವೈದ್ಯರ ದಿನಾಚರಣೆ ಸಂಭ್ರಮ

error: Content is protected !!
Scroll to Top