? ಬಂಟ್ವಾಳ: ಬರೋಬ್ಬರಿ 13 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ➤ ಐವರು ಖತರ್ನಾಕ್ ಕಿಲಾಡಿಗಳ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 05. ಜಿಲ್ಲೆಯಲ್ಲಿ ಹತ್ತಕ್ಕೂ ಮಿಕ್ಕ ಸರಣಿ ಕಳ್ಳತನಗೈದಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ವಿಶೇಷ ತಂಡ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅರ್ಕುಳ ವಳಚ್ಚಿಳ್ ನಿವಾಸಿ ಅಮ್ಮೀ ಯಾನೆ ಅಮರುದ್ದೀನ್, ಮಂಗಳೂರು ಕಣ್ಣೂರು ನಿವಾಸಿಗಳಾದ ಮಹಮದ್ ಯೂನುಸ್ ಮತ್ತು ಹಫೀಸ್ ಯಾನೆ ಅಪ್ಪಿ, ಸಜಿಪಮೂಡ ಗ್ರಾಮದ ಪೆರ್ವಾ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಯಾನೆ ಕಳ್ಳ ಫಾರೂಕ್ (27) ಹಾಗೂ ಮಂಗಳೂರು ಬೆಂಗ್ರೆ ನಿವಾಸಿ ಮಹಮ್ಮದ್ ಸಫ್ವಾನ್ ಯಾನೆ ಸರತ್ ಯಾನೆ ಕರೂ ಯಾನೆ ಸರೂ ಯಾನೆ ಸಫ್ವಾನ್ (19) ಎಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ವಿಟ್ಲ, ಉಪ್ಪಿನಂಗಡಿ ಹಾಗೂ ಪುತ್ತೂರು ಭಾಗದಲ್ಲಿ ನಡೆದ ಒಟ್ಟು 13 ಕಳವು ಪ್ರಕರಣದಲ್ಲಿ ಈ ಐವರು ಖದೀಮರ ತಂಡ ಭಾಗಿಯಾಗಿರುವುದಾಗಿ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳಿಂದ ಆರೋಪಿಗಳಿಂದ 3 ಬೈಕ್, ಒಂದು ಮೊಬೈಲ್, 6 DVR set box, 14 ಜೀವಂತ ಗುಂಡು, 2 ಮಾನಿಟರ್, ಬ್ರಾಡ್ ಬ್ಯಾಂಡ್ ಒ ಎಲ್ ಟಿ ಬಾಕ್ಸ್ ಪತ್ತೆ ಹಚ್ಚುವ ಯಂತ್ರ ಮತ್ತು ಸುಮಾರು 40,000 ಸಾವಿರ ರೂ. ಹಣ ಸೇರಿದಂತೆ ಒಟ್ಟು ಅಂದಾಜು ರೂ 4,80,000 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಸುಳ್ಯ: ಭೀಕರ ರಸ್ತೆ ಅಪಘಾತ ► ಮೂರು ತಿಂಗಳ ಮಗು ಸೇರಿ ಇಬ್ಬರು ಮೃತ್ಯು


ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕರಾದ ಅವಿನಾಶ್ ಮತ್ತು ಕಲೈಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಪ್ರಸನ್ನ ಮತ್ತು ಸಂಜೀವ್, ವಿಟ್ಲ ಠಾಣಾ ಉಪನಿರೀಕ್ಷಕರಾದ ವಿನೋದ್ ರೆಡ್ಡಿ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕರಾದ ಈರಯ್ಯ, ಡಿಸಿಐಬಿ ಮತ್ತು ಠಾಣಾ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವೂ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಅರೋಪಿಗಳ ಕಳ್ಳತನ ಪ್ರಕರಣ:
1. ಬಂಟ್ವಾಳ ನಗರ ಪೊಲೀಸ್ ಠಾಣೆ ಆ. ಕ್ರ.6/2021 ಸುರಭಿ ಬಾರ್ ಕಳ್ಳತನ
2. ಬಂಟ್ವಾಳ ನಗರ ಪೊಲೀಸ್ ಠಾಣೆ ಆ. ಕ್ರ 30/2020 ನರಿಕೊಂಬು ದೇವಸ್ಥಾನ ಹುಂಡಿ ಕಳವು
3. ಬಂಟ್ವಾಳ ನಗರ ಪೊಲೀಸ್ ಠಾಣೆ 36/2020 ಮೆಲ್ಕಾರ್ ಕಾಲೇಜ್ ಕಳ್ಳತನ
4. ವಿಟ್ಲ ಪೊಲೀಸ್ ಠಾಣೆ ಆ. ಕ್ರ 112/2021 ERSS ಪೆಟ್ರೋಲ್ ಬಂಕ್ ಕಳ್ಳತನ ಪ್ರಕರಣ
5. ಬಂಟ್ವಾಳ ನಗರ ಪೊಲೀಸ್ ಠಾಣೆ ಆ.ಕ್ರ್ 47/2020 ಅಮ್ಟೂರು ಚರ್ಚ್ ಕಳ್ಳತನ
6. ಬಂಟ್ವಾಳ ನಗರ ಪೊಲೀಸ್ ಠಾಣೆ 5/2021 ಚಂಡಿಕಾ ಪರಮೇಶ್ವರಿ ದೇವಸ್ಥಾನ ಹುಂಡಿ ಕಳ್ಳತನ
7. ಬಂಟ್ವಾಳ ರೂರಲ್ ಪೊಲೀಸ್ ಠಾಣೆ ಆ ಕ್ರಾ 1/2020 ಸ್ಕೂಲ್ ಕಳ್ಳತನ
8. ಬಂಟ್ವಾಳ ರೂರಲ್ ಪೊಲೀಸ್ ಠಾಣೆ ಆ ಕ್ರಾ 26/20 ಶಂಭೂರು ಸ್ಕೂಲ್ ಕಳ್ಳತನ
9. ಬಂಟ್ವಾಳ ರೂರಲ್ ಪೊಲೀಸ್ ಠಾಣೆ ಆ ಕ್ರಾ 16/2021 ಪರ್ಲ ಚರ್ಚ್ ಕಳ್ಳತನ
10. ಬಂಟ್ವಾಳ ರೂರಲ್ ಪೊಲೀಸ್ ಠಾಣೆ ಆ ಕ್ರಾ 17/2021 ರಾಜೇಶ್ ಬಾರ್ ಕಳ್ಳತನ
11. ಮಂಗಳೂರು ರೂರಲ್ ಪೊಲೀಸ್ ಠಾಣೆ ಆ ಕ್ರಾ 5/2021 ಪಲ್ಸರ್ ಬೈಕ್ ಕಳ್ಳತನ
12. ಉಪ್ಪಿನಂಗಡಿ ಪೊಲೀಸ್ ಠಾಣೆ ಆ ಕ್ರಾ 119/2020 ಉಲ್ಲಾಸ್ ಬಾರ್ ಕಳ್ಳತನ
13. ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿ ಅಲ್ಲಿ ಪಲ್ಸರ್ ಬೈಕ್ ಕಳ್ಳತನ

Also Read  ಕುಡಿಯುವ ನೀರಿನ ಕೊರತೆ ಆಗದಂತೆ ಕ್ರಮ ವಹಿಸಿ - ನೀರಿನ ಸಮಸ್ಯೆ ಎದುರಾದರೆ ಅಧಿಕಾರಿಗಳೇ ಹೊಣೆ- ಜಿಲ್ಲಾಧಿಕಾರಿ ಎಚ್ಚರಿಕೆ

error: Content is protected !!
Scroll to Top