ಮಣಿಪಾಲ: ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಣಿಪಾಲ, ಫೆ. 05. ಆಟೋ ರಿಕ್ಷಾವೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಮಣಿಪಾಲ ಪೊಲೀಸರು ಇಂದು ಶೀಂಬ್ರಾ ಸೇತುವೆ ಬಳಿ ಬಂಧಿಸಿದ ಘಟನೆ ನಡೆದಿದೆ.


ಬಂಧಿತರನ್ನು ಮಹಾರಾಷ್ಟ್ರ ಮೂಲದ ಗೌತಮ್ ರಾಜು ಶಿಮುಂಗೆ(30), ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ (38) ಹಾಗೂ ಬ್ರಹ್ಮಾವರ ಕೊಳಲಗಿರಿಯ ಕೃಷ್ಣ ಜಲಗಾರ್ (40)ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 2,66,000 ರೂ. ಮೌಲ್ಯದ ಸುಮಾರು 8 ಕೆ.ಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಶಿರಾಡಿ: ಆನೆ ದಾಳಿಗೆ ಮೃತಪಟ್ಟ ವ್ಯಕ್ತಿ ಮನೆಗೆ ಸಚಿವ ಅಂಗಾರ ಭೇಟಿ ➤ ಗಾಯಾಳುವಿನ ಚಿಕಿತ್ಸೆ ವೆಚ್ಚ ಭರಿಸುವಂತೆ ಸೂಚನೆ

error: Content is protected !!
Scroll to Top