ಪುತ್ತೂರು: ಯುವತಿಯ ಅತ್ಯಾಚಾರ ಮತ್ತು ಜೀವ ಬೆದರಿಕೆ ಪ್ರಕರಣ ➤ ಆರೋಪಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 04. ಬಲವಂತ ದೈಹಿಕ ಸಂಪರ್ಕ ಬೆಳೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣದ ಆರೋಪಿಗೆ ಮಂಗಳೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

 

ಸವಣೂರು ಇಡ್ಯಾಡಿಯ ಪೂವಣಿ ಗೌಡ ಎಂಬವರ ಪುತ್ರ ಬಾಲಕೃಷ್ಣ ಎಂಬವರು ದಿನಾಂಕ 8.19.2020ರಂದು ಯುವತಿಯೋರ್ವಳು ಕೆಲಸದಿಂದ ಹಿಂದಿರುಗುತ್ತಿದ್ದ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಸರ್ವೆ ಎಂಬಲ್ಲಿ ನಿಲ್ಲಿಸಿ ಯುವತಿಯ ಮೊಬೈಲನ್ನು ಬಿಸಾಡಿ ಬೊಬ್ಬೆ ಹೊಡೆದರೆ ನಿನ್ನನ್ನು, ನಿನ್ನ ತಂದೆ ತಾಯಿಯನ್ನು ಸಾಯಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ನೀಡಿದ್ದಾನೆ. ಪುತ್ತೂರು: ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣದ ಆರೋಪಿಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸವಣೂರು ಇಡ್ಯಾಡಿಯ ಪೂವಣಿ ಗೌಡ ಎಂಬವರ ಪುತ್ರ ಬಾಲಕೃಷ್ಣ ಎಂಬವರು ದಿನಾಂಕ ೮.೧೦.೨೦೨೦ರಂದು ಯುವತಿಯೋರ್ವರು ಕೆಲಸ ಬಿಟ್ಟು ಮನೆಗೆ ಹೋಗುತ್ತಿರುವಾಗ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಸರ್ವೆ ಗ್ರಾಮ ಸರ್ವೆ ಎಂಬಲ್ಲಿ ಆಟೋ ನಿಲ್ಲಿಸಿ ಯುವತಿಯ ಮೊಬೈಲನ್ನು ಬಿಸಾಡಿ ಬೊಬ್ಬೆ ಹೊಡೆದರೆ ನಿನ್ನನ್ನು, ನಿನ್ನ ತಂದೆ ತಾಯಿಯನ್ನು ಸಾಯಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ನೀಡಿದ್ದಲ್ಲದೇ ಪುನಃ ಪುತ್ತೂರಿಗೆ ಬಂದು ಬಸ್ಸಿನಲ್ಲಿ ಮಂಗಳೂರಿಗೆ ಹೋಗಿ ನಂತರ ಖಾಸಗಿ ಬಸ್‌ ಮೂಲಕ ಬಾಂಬೆಯ ತನ್ನ ಅಕ್ಕನ ಮನೆಗೆ ಕರೆದುಕೊಂಡು ಹೋಗಿ ನಿನ್ನನ್ನು ಸಾಯಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ನೀಡಿದ್ದನು. ದಿನಾಂಕ 11.10.2020ರಂದು ಮುಂಬಯಿಯ ನಿರ್ಮಲಾ ನಗರದ ಶ್ರೀ ರಾಮ ಮಂದಿರದಲ್ಲಿ ಮೋಸದ ಮದುವೆ ಮಾಡಿ ದಿನಾಂಕ 12.10.2020ಕ್ಕೆ ಮ್ಯಾರೇಜ್ ಫಿಕ್ಸ್ ಮಾಡಿ ತನ್ನ ಅಕ್ಕನ ಮನೆಯಲ್ಲಿ 12 ದಿನಗಳು ವಾಸವಿದ್ದು, ಒತ್ತಾಯ ಪೂರ್ವಕ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು, ದಿನಾಂಕ 12.10.2020ರಂದು ಪುತ್ತೂರಿನ ಮಹಿಳಾ ಠಾಣೆಗೆ ಬಂದ ಸಂತ್ರಸ್ತ ಯುವತಿಯು ಜೀವ ಬೆದರಿಕೆ ಮತ್ತು ದೈಹಿಕ ಸಂಪರ್ಕ ಬೆಳೆಸಿರುವುದಾಗಿ ದೂರು ದಾಖಲಿಸಿದ್ದರು. ಬಳಿಕ ಬಾಲಕೃಷ್ಣರವರನ್ನು ಬಂಧಿಸಿದ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಇದೀಗ ಆರೋಪಿಯ ಜಾಮೀನು ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಬಾಲಕೃಷ್ಣರಿಗೆ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದೆ.

Also Read  ಬೆಂಬಲ ಬೆಲೆಯಡಿಯಲ್ಲಿ ಭತ್ತ ಖರೀದಿ ➤ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ

error: Content is protected !!
Scroll to Top