ಮನೆಯವರ ವಿರೋಧದ ನಡುವೆಯೇ ಮದುವೆಯಾದ ಹಿನ್ನೆಲೆ ➤ ಮದುಮಗನಿಗೆ ಸೇರಿದ 250 ಅಡಿಕೆ ಗಿಡಗಳನ್ನು ಕತ್ತರಿಸಿದ ಪೋಷಕರು..!

(ನ್ಯೂಸ್ ಕಡಬ) newskadaba.com ತುಮಕೂರು, ಫೆ. 04. ಮನೆಯವರ ಇಚ್ಛೆಗೆ ವಿರುದ್ದವಾಗಿ ಮದುವೆಯಾದಳು ಎಂಬ ದ್ವೇಷದಲ್ಲಿ ಮದುಮಗನಿಗೆ ಸೇರಿದ 250 ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ ವಿಲಕ್ಷ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರಪಾಳ್ಯ ಎಂಬಲ್ಲಿ ನಡೆದಿದೆ.

ಮಲ್ಲಸಂದ್ರಪಾಳ್ಯ ಗ್ರಾಮದ ರವಿಚಂದ್ರ ಹಾಗೂ ಅನು ಎಂಬವರು ಪ್ರೀತಿಸಿ ಎರಡು ದಿನಗಳ ಹಿಂದೆ ಮದುವೆಯಾಗಿದ್ದರು. ಇವರಿಬ್ಬರ ಪ್ರೀತಿಗೆ ಯುವತಿಯ ಮನೆಯವರಿಂದ ವಿರೋಧವಿದ್ದು, ಈ ಹಿನ್ನೆಲೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ ಎನ್ನುವ ದ್ವೇಷಕ್ಕೆ ಅನು ಪೋಷಕರಾದ ಸಂತೋಷ್ ಹಾಗೂ ಗಂಗಮ್ಮ ಅಡಿಕೆ ಗಿಡಗಳನ್ನು ನಾಶಪಡಿಸಿದ್ದಾರೆ.

Also Read  ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಬಸ್ ತಂಗುದಾಣ ಲೋಕಾರ್ಪಣೆ

error: Content is protected !!
Scroll to Top