ದ.ಕ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಲುಕ್ಮಾನ್ ಬಂಟ್ವಾಳ, ಉಪಾಧ್ಯಕ್ಷರಾಗಿ ಗಿರೀಶ್ ಆಳ್ವ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 04. ತಿಂಗಳ ಹಿಂದೆ ನಡೆದಿದ್ದ ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ದ.ಕ ಜಿಲ್ಲಾಧ್ಯಕ್ಷರಾಗಿ ಲುಕ್ಮಾನ್ ಬಂಟ್ವಾಳ ಆಯ್ಕೆಯಾಗಿದ್ದಾರೆ.

ಚುನಾವಣೆಯು ಪಾರದರ್ಶಕವಾಗಿರಬೇಕು ಎಂಬ ನಿಟ್ಟಿನಲ್ಲಿ ಜನವರಿ 10, 11 ಹಾಗೂ 12ನೇ ತಾರೀಕಿನಂದು ಯುವ ಕಾಂಗ್ರೆಸ್ ಬ್ಲಾಕ್, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಚುನಾವಣೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಸಲಾಗಿತ್ತು. ಅಧ್ಯಕ್ಷರಾಗಿ ಆಯ್ಕೆಯಾದ ಲುಕ್ಮಾನ್ ಬಂಟ್ವಾಳ 5573 ಮತ ಗಳಿಸಿದ್ದು, ಉಪಾಧ್ಯಕ್ಷರಾಗಿ ಗಿರೀಶ್ ಆಳ್ವಾ 4169 ಮತಗಳನ್ನು ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶುಹೈಬ್ ಆಯ್ಕೆಯಾಗಿದ್ದಾರೆ ಎಂದು ಯುವ ಕಾಂಗ್ರೆಸ್ ಅಧಿಕೃತ ಜಾಲತಾಣದಲ್ಲಿ ಘೋಷಿಸಿದೆ.

Also Read  ಅಂಗವೈಕಲ್ಯವನ್ನು ಮೆಟ್ಟಿನಿಂತ ಎಂಡೋಪೀಡಿತ ವಿದ್ಯಾರ್ಥಿ ➤ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಲುಕ್ಮಾನ್ ಬಂಟ್ವಾಳ ಹಾಗೂ ಉಪಾಧ್ಯಕ್ಷರಾಗಿ ಆಯ್ಮೆಯಾದ ಗಿರೀಶ್ ಆಳ್ವರಿಗೆ ಹಾರ್ದಿಕ ಅಭಿನಂದನೆಗಳು.

ಮಹಮ್ಮದ್ ಫೈಝಲ್ ಎಸ್ಇಎಸ್, ಯುವ ಕಾಂಗ್ರೆಸ್ ಕಡಬ,
ಮಹಮ್ಮದ್ ಜುನೈದ್ ಎಸ್ಇಎಸ್, ಉಪಾಧ್ಯಕ್ಷರು, ಯುವ ಕಾಂಗ್ರೆಸ್ ಕಡಬ ಬ್ಲಾಕ್
ಹಾಜಿ ಹನೀಫ್ ಕೆ.ಎಂ., ಮಾಜಿ ಅಧ್ಯಕ್ಷರು, ಕಡಬ ಗ್ರಾಮ ಪಂಚಾಯತ್

error: Content is protected !!
Scroll to Top