ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸುತ್ತದೆ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 04. ಹೆಚ್ಚಿನ ಎಲ್ಲಾ ಕ್ಯಾನ್ಸರ್ ತಡೆಗಟ್ಟಬಹುದಾದ ರೋಗವಾಗಿದ್ದು, ಮಾರಣಾಂತಿಕ ರೋಗಗಳ ಪಟ್ಟಿಯಲ್ಲಿ ಹೃದಯಘಾತದ ನಂತರ ಎರಡನೇ ಸ್ಥಾನಪಡೆದಿದೆ. ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಕ್ಯಾನ್ಸರ್ ರೋಗ ಬಂದವರೆಲ್ಲ ಸಾಯುವುದಿಲ್ಲ. ಹೆಚ್ಚಿನ  ಎಲ್ಲಾ ಕ್ಯಾನ್ಸರ್‍ ಗಳು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ ಎಂದು ಡಾ|| ಮುರಲಿ ಮೋಹನ ಚೂಂತಾರು ಅಭಿಪ್ರಾಯ ಪಟ್ಟರು.

ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ “ ವಿಶ್ವ  ಕ್ಯಾನ್ಸರ್ ತಿಳುವಳಿಕಾ ದಿನ” ಇದರ ಅಂಗವಾಗಿ ಉಚಿತ ಕ್ಯಾನ್ಸರ್ ಮಾಹಿತಿ ಶಿಬಿರ ಇಂದು ಬೆಳಗ್ಗೆ 10 ರಿಂದ ಸಾಯಂಕಾಲ 5 ರವರೆಗೆ ನಡೆಯಿತು. ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಕ್ಯಾನ್ಸರ್ ಬಗ್ಗೆ ಮಾಹಿತಿ ಇರುವ ಕರಪತ್ರ ಹಂಚಲಾಯಿತು ಮತ್ತು ‘ಅರಿವು’ ಬಾಯಿ ಕ್ಯಾನ್ಸರ್ ಮಾರ್ಗದರ್ಶಿ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು. ಶ್ರೀ ಗುಣಾಜೆ ಉದಯಶಂಕರ್ ಭಟ್ ಇವರಿಗೆ ಪುಸ್ತಕ ಮತ್ತು ಕರಪತ್ರ ಹಂಚುವುದರ ಮುಖಾಂತರ ಈ ಶಿಬಿರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಡಾ|| ರಾಜಶ್ರೀ ಮೋಹನ್, ಡಾ|| ನೇಹಾ ವಿಕಾಸ್ ಚಿಕಿತ್ಸಾಲಯದ ಶುಶ್ರೂಶಕಿಯರಾದ ಶ್ವೇತ, ಚೈತ್ರ, ರಮ್ಯ ಮತ್ತು ಸುಶ್ಮಿತಾ ಉಪಸ್ಥಿತರಿದ್ದರು.

Also Read  ಎಸ್.ಎಂ.ಕೃಷ್ಣ ಗೌರವಾರ್ಥ ವಿಧಾನ ಮಂಡಲದ ಅಧಿವೇಶನ ಮುಂದೂಡಿಕೆ

error: Content is protected !!
Scroll to Top