ಪುತ್ತೂರು: ದೇವಸ್ಯದ ಕಿರುಸೇತುವೆಯ ಅಗಲೀಕರಣ ಕಾಮಗಾರಿ ಹಿನ್ನೆಲೆ ➤ ಬದಲಿ ರಸ್ತೆ ಉಪಯೋಗಿಸುವಂತೆ ಲೋಕೋಪಯೋಗಿ ಇಲಾಖೆ ಸೂಚನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 04. ತಾಲೂಕಿನ ಆರ್ಯಾಪು ಗ್ರಾಮ ವ್ಯಾಪ್ತಿಯ ದೇವಸ್ಯ ಎಂಬಲ್ಲಿ ಕಿರಿದಾದ ಸೇತುವೆಯ ಅಗಲೀಕರಣದ ಹಿನ್ನೆಲೆ 11 ದಿನಗಳ ಕಾಲ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ದೇವಸ್ಯ ಎಂಬಲ್ಲಿ ಸೇತುವೆ ಅಗಲೀಕರಣ ಕಾಮಗಾರಿ ಹಿನ್ನೆಲೆ ಫೆಬ್ರವರಿ 5 ರಿಂದ 15 ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ಲೋಕೋಪಯೋಗಿ ಇಲಾಖೆಯು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್‍ ಗೆ ಪತ್ರ ಬರೆದಿದ್ದು, ‘ಸೇತುವೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲು ಬದಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದಿದ್ದಾರೆ. ಲಘು ವಾಹನಗಳು ಬಪ್ಪಳಿಗೆ-ಬಲ್ನಾಡು-ಬೊಬ್ಬಿಲಿ-ಅಟ್ಲಾರು-ದೇವಸ್ಯ ರಸ್ತೆಯಾಗಿ ಸಂಚರಿಸಬಹುದು ಇಲ್ಲವೇ ಸಂಪ್ಯ-ಒಳತ್ತಡ್ಕ-ದೇವಸ್ಯ ಮುಖೇನಾ ಸಂಚರಿಸ ಬಹುದಾಗಿದ್ದು, ಘನ ವಾಹನಗಳು ಕಬಕ-ವಿಟ್ಲ-ಉಕ್ಕುಡ-ಮಂಜೇಶ್ವರ ರಸ್ತೆಯಾಗಿ ಸಂಚರಿಸ ಬೇಕಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ಎಂಟರ ಹರೆಯದ ಬಾಲಕಿ ಆಸಿಫಾಳ ಹತ್ಯೆ ಪ್ರಕರಣ ► ಕಡಬ ವಲಯ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ

error: Content is protected !!
Scroll to Top