ಗುಡಿಸಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ➤ ಎರಡು ಮೇಕೆಯ ಜೊತೆಗೆ ಧವಸ-ಧಾನ್ಯಗಳು ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com ತುಮಕೂರು, ಫೆ. 04. ಯಾರೂ ಇಲ್ಲದ ಸಮಯದಲ್ಲಿ ಹಾಡಹಗಲೇ ಕಿಡಿಗೇಡಿಗಳು ಗುಡಿಸಲಿಗೆ ಬೆಂಕಿ ಹಚ್ಚಿದ ಪರಿಣಾಮ ಎರಡು ಮೇಕೆ ಮತ್ತು ದವಸಧಾನ್ಯಗಳು ಸುಟ್ಟು ಕರಕಲಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ.

ಗುಡಿಸಲಿನಲ್ಲಿ ವಾಸಿಸುತ್ತಿದ್ದ ತಾಲೂಕಿನ ಹರಿಹರಾಪುರ ಗ್ರಾಮದ ತಿಮ್ಮಕ್ಕ ಹಾಗೂ ದೊಡ್ಡಹನುಮಂತರಾಯಪ್ಪ ದಂಪತಿ ಕೂಲಿ ಕೆಲಸಕ್ಕೆಂದು ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿದ್ದು, ಎಲ್ಲವನ್ನೂ ಕಳೆದುಕೊಂಡಿರುವ ಅವರ ರೋಧನ ಮುಗಿಲು ಮುಟ್ಟಿದೆ. ಗುಡಿಸಲಿಗೆ ಬಂಕಿ ಕೊಟ್ಟ ಕಿರಾತಕರು ಮನೆ ಮುಂದೆಯೇ ಕಟ್ಟಿಹಾಕಿದ್ದ ಎರಡು ಮೇಕೆಗಳನ್ನು ಸುಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 20 ಸಾವಿರ ಬೆಲೆ ಬಾಳುವ ಎರಡು ಮೇಕೆ, ದವಸ-ಧಾನ್ಯ, ಬಟ್ಟೆ-ಬರೆ ಎಲ್ಲವೂ ಸುಟ್ಟು ಹೋಗಿದೆ. ಮನೆ ಸುಟ್ಟ ವಿಷಯ ಮುಟ್ಟುತ್ತಿದ್ದಂತೆಯೇ ಮನೆಗೆ ಬಂದ ಆಕೆ ಕಣ್ಣೀರು ಹಾಕಿದ್ದಾರೆ. ಈ ಕುರಿತು ಅರಸಿಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಉಡುಪಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ

error: Content is protected !!
Scroll to Top