ಪಂಜ: ವರ್ಷಾವಧಿ ಜಾತ್ರೋತ್ಸವ ಹಸಿರು ಕಾಣಿಕೆ ಮೆರವಣಿಗೆಯ ಮೂಲಕ ಸಮಾಪ್ತಿ

(ನ್ಯೂಸ್ ಕಡಬ) newskadaba.com ಪಂಜ, ಫೆ. 04. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವ ಆರಂಭಗೊಂಡು ಫೆ. 03 ರಂದು ಹಸಿರು ಕಾಣಿಕೆ ಮೆರವಣಿಗೆಯು ಕಟ್ಟೆಯಿಂದ ಆರಂಭಗೊಂಡು ದೇವಳಕ್ಕೆ ಸಮರ್ಪಣೆ ಗೊಂಡಿತು.

ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ತಿಮ್ಮಪ್ಪಗೌಡ ಪುತ್ಯ ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ದೇವಳದ ಮಾಜಿ ಆಡಳಿತಾಧಿಕಾರಿಗಳು ಡಾ. ದೇವಿಪ್ರಸಾದ್ ಕಾನತ್ತೂರ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುವರ್ಣಿನಿ ಎನ್.ಎಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ನಾರಾಯಣಗೌಡ , ದಿನೇಶ್ ಗರಡಿ ಹಾಗೂ ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.

Also Read  ಉಪ್ಪಿನಂಗಡಿ: ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್ ➤ ಕಡಬದ ನವವಿವಾಹಿತ ಮೃತ್ಯು

error: Content is protected !!
Scroll to Top