ಕಾಪು: ಮಂದಿರದ ಕಾಣಿಕೆ ಹುಂಡಿಯಿಂದ ಕಳವು

(ನ್ಯೂಸ್ ಕಡಬ) newskadaba.com ಕಾಪು, ಫೆ. 04. ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬಳಿಯಿರುವ ನಾರಾಯಣಗುರು ಮಂದಿರಕ್ಕೆ ನುಗ್ಗಿದ ಕಳ್ಳರು ಕಾಣಿಕೆಹುಂಡಿಯನ್ನು ದೋಚಿದ ಘಟನೆ ನಡೆದಿದೆ.

ಎಂದಿನಂತೆ ಪೂಜೆಗಾಗಿ ಅರ್ಚಕರು ಇಂದು ಬೆಳಗ್ಗಿನ‌ ಜಾವ ಮಂದಿರಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಮಂದಿರದ ಬಾಗಿಲಿನ ಚಿಲಕ ಮುರಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ನಗದನ್ನು ಕಳವು ಮಾಡಿದ್ದಾರೆ. ಅಲ್ಲದೆ ಕಪಾಟಿನ ಬೀಗ ಮುರಿದಿದ್ದಾರೆ. ಈ ಕುರಿತು ಕಾಪು ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.

Also Read  ಹೊಸ್ಮಠ ಸೇತುವೆಯ ಮೇಲೆ ನೆರೆ ನೀರು ಇರುವಾಗಲೇ ವಾಹನ ದಾಟಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ► ಪೊಲೀಸರಿಗೊಂದು ನ್ಯಾಯ, ನಮಗೊಂದು ನ್ಯಾಯವೇ..?ಸಾರ್ವಜನಿಕರ ಆಕ್ರೋಶ..!!

error: Content is protected !!
Scroll to Top