ಬಂಟ್ವಾಳ: ವೃದ್ದೆ ಅಸಹಜ ಮೃತ್ಯು ಪ್ರಕರಣಕ್ಕೆ ಹೊಸ ಟ್ವಿಸ್ಟ್..! ➤ ಪೊಲೀಸ್ ತನಿಖೆಯ ವೇಳೆ ಬಯಲಾಯಿತು ಕೊಲೆ ರಹಸ್ಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 04. ವೃದ್ದೆಯೋರ್ವರು ಅಸಹಜವಾಗಿ ಮೃತಪಟ್ಟಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನ ಅಮ್ಮುಂಜೆ ಎಂಬಲ್ಲಿ ವರದಿಯಾಗಿತ್ತು. ಆದರೆ ಇದೀಗ ಈ ಪ್ರಕರಣದ ಕುರಿತಂತೆ ಅಸಹಜ ಸಾವಲ್ಲ ಕೊಲೆ ಎಂಬುವುದು ಸಾಬೀತಾಗಿದೆ.


ಮೃತ ಮಹಿಳೆಯನ್ನು ಬೆನೆಡಿಕ್ಟ ಕಾರ್ಲೊ(72) ಎಂದು ಗುರುತಿಸಲಾಗಿದೆ. ಇವರು ಜ. 26ರಂದು ಅಸಹಜವಾಗಿ ಮೃತಪಟ್ಟಿದ್ದು, ಆದರೆ ಈ ಕುರಿತು ಫೆ.2ರಂದು ಅವರ ಪುತ್ರ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ತಾಯಿಯ ಸಾವಿನ ಬಗ್ಗೆ ಅನುಮಾನವಿದೆ ಎಂಬ ದೂರಿನ ಬಗ್ಗೆ ಹಲವರಲ್ಲಿ ವಿಚಾರಿಸಿ, ಕೊನೆಗೆ ಮನೆ ಕೆಲಸದಾಕೆಯ ವಿಚಾರಣೆ ನಡೆಸಿದಾಗ ಆಕಯೆ ಕೊಲೆಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಪ್ರಶ್ಚಿತಾ ಬರೆಟ್ಟೋ, ಹಾಗೂ ಆಕೆಯ ಸ್ನೇಹಿತರಾದ ನರಿಕೊಂಬು ನಿವಾಸಿ ಸತೀಶ ಹಾಗೂ ಚರಣ್ ಎಂಬವರೊಂದಿಗೆ ಸೇರಿ ಜ. 25ರಂದು ಕಾರ್ಲೊ ರವರ ಮನೆಯಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣವನ್ನು ಲಪಟಾಯಿಸಿದ್ದಾಳೆ. ಇದೀಗ ಮೂವರು ಆರೋಪಿಗಳ ಜೊತೆಗೆ 98 ಗ್ರಾಂ.ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈ ಕುರಿತು ತನಿಖೆ ನಟೆಸಿದ ಬಂಟ್ವಳ ಪೊಲೀಸರು ಪ್ರಕರಣ ಭೇದಿಸುವಲ್ಲಿ ಸಫಲರಾಗಿದ್ದಾರೆ.

Also Read  ಟ್ರಾಫಿಕ್ ಜಾಮ್ ➤ ಸುವರ್ಣಸೌಧಕ್ಕೆ ಬೈಕ್ ನಲ್ಲಿ ತೆರಳಿದ ಸಚಿವ ಮುರುಗೇಶ್ ನಿರಾಣಿ

error: Content is protected !!
Scroll to Top