ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಶಾಂತಿಮೊಗರು, ಫೆ. 03. ಮೀನು ಹಿಡಿಯಲೆಂದು ತೆರಳಿದ್ದ ವೇಳೆ ನದಿಯಲ್ಲಿ ನಾಪತ್ತೆಯಾಗಿದ್ದ ಕಾಂತಾರ ಎಂಬವರ ಮೃತದೇಹ ಪತ್ತೆಯಾಗಿದೆ.

ಅಗ್ನಿಶಾಮಕದಳದ ನಿರಂತರ ಪ್ರಯತ್ನದ ಬಳಿಕ ಮುಳುಗು ತಜ್ಞರಾದ ಹಮೀದ್ ಗೂಡಿನ ಬಳಿ, ಆರಿಫ್ ಗೂಡಿನಬಳಿ, ಮಹಮ್ಮದ್ ಗೂಡಿನಬಳಿ ಕ್ಷಣಾರ್ಧದಲ್ಲಿ ಮೃತದೇಹ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹದ ಕಾಲಿನ ಭಾಗದಲ್ಲಿ ಮೀನು ಹಿಡಿಯುವ ಬಲೆಯ ಅಚ್ಚು ಮೂಡಿದ್ದು, ಈಜುವಾಗ ಕಾಲಿಗೆ ಅಡ್ಡಲಾಗಿ ಬಲೆ ಸಿಕ್ಕಿದ್ದರಿಂದ ಈ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

Also Read  ರಾಜ್ಯಾದ್ಯಂತ 'ಕರೆಂಟ್ ಬಿಲ್ ಕಟ್ಬೇಡಿ' ಅಭಿಯಾನಕ್ಕೆ ವಿಪಕ್ಷಗಳ ಸಿದ್ದತೆ

 

error: Content is protected !!