ಮಂಗಳೂರು: ಫೆ. 06ರಂದು ಉದ್ಯೋಗ ಮೇಳ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 03. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮಂಗಳೂರು ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ ಪುರುಷ) ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟೀಯ ವೃತ್ತಿ ಸೇವಾ ಯೋಜನೆಯ ಮಾದರಿ ವೃತ್ತಿಕೇಂದ್ರದ ಅಡಿಯಲ್ಲಿ ಫೆಬ್ರವರಿ 06 ರಂದುಬೆಳಿಗ್ಗೆ 9.30 ಕ್ಕೆ ಕದ್ರಿಹಿಲ್ಸ್‍ ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.


ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಂಗಳೂರು ದೂರವಾಣಿ ಸಂಖ್ಯೆ:0824-2457139ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಟಾರ್ಗೆಟ್ ಇಲ್ಯಾಸ್ ಹಂತಕರಲ್ಲಿ ಓರ್ವ ಪೊಲೀಸ್ ಬಲೆಗೆ..? ► ಇತ್ತೀಚೆಗೆ ತನ್ನದೇ ಗ್ರೂಪ್‌ನಿಂದ ಕೊಲೆಯಾಗಿದ್ದ ಟಾರ್ಗೆಟ್ ಇಲ್ಯಾಸ್

error: Content is protected !!
Scroll to Top