ಮಂಗಳೂರು: ಮುಡಿಪು ಬೆಟ್ಟದಲ್ಲಿ ಸರಸದಲ್ಲಿ ತೊಡಗಿದ್ದ ಅನ್ಯಕೋಮಿನ ಜೋಡಿ..! ➤ ಪೊಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ

(ನ್ಯೂಸ್ ಕಡಬ) newskadaba.com ಕೊಣಾಜೆ, ಫೆ. 03. ಮುಡಿಪು ಪವಾಡ ಬೆಟ್ಟದಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಅಂತರ್ಜಾತಿಯ ಜೋಡಿಯೊಂದನ್ನು ಪತ್ತೆ ಹಚ್ಚಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂಡುಬಿದಿರೆ ನಿವಾಸಿ ಮಹಮ್ಮದ್ ಜುನೈದ್ ಎಂಬ ಯುವಕನು ಮುಡಿಪು ಡಿ.ಜಿ ಕಟ್ಟೆ ವಿದ್ಯಾನಗರ ನಿವಾಸಿಯಾದ ಹಿಂದೂ ಯುವತಿಯೊಂದಿಗೆ ಪರಿಚಯ ಬೆಳೆಸಿದ್ದು, ಈ ಜೋಡಿಯು ಮುಡಿಪು ಬೆಟ್ಟದಲ್ಲಿ ಸರಸ ಸಲ್ಲಾಪದಲ್ಲಿದ್ದರು ಎನ್ನಲಾಗಿದೆ. ಈ ಕುರಿತು ಮಾಹಿತಿಯನ್ನು ಕಲೆಹಾಕಿದ ದಾಳಿ ಮಾಡಿದ ಹಿಂದು ಜಾಗರಣ ವೇದಿಕೆ ಸದಸ್ಯರು ಘಟನಾ ಸ್ಥಳಕ್ಕೆ ಬಂದು ಯುವಕನಲ್ಲಿ ವಿಚಾರಿಸಿದಾಗ ತಾನು ಬ್ರಾಹ್ಮಣ, ಹೆಸರು ಗಣೇಶನೆಂದು ಹೇಳಿದ್ದಾನೆ. ಈ ಸಂದರ್ಭ ಕಾರ್ಯಕರ್ತರು ಜನಿವಾರ ಎಲ್ಲೆಂದು ಕೇಳಿದಾಗ ಗಲಿಬಿಲಿಗೊಂಡಿದ್ದಾನೆ. ಬಳಿಕ ಯುವಕರ ಧರ್ಮದೇಟು ಬಿದ್ದಾಗ ಸತ್ಯಾಂಶ ಹೊರಬಿದ್ದಿದ್ದು, ಯುವಕನನ್ನು ಕೊಣಾಜೆ ಪೊಲೀಸರ ವಶಕ್ಕೆ ನೀಡಲಾಗಿದೆ.

Also Read  ಕೆಎಸ್ಸಾರ್ಟಿಸಿ ಬಸ್ - ಬೈಕ್ ನಡುವೆ ಢಿಕ್ಕಿ ➤ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

error: Content is protected !!
Scroll to Top